ರೆಡ್ಡಿ ವಿರೋಧಿ ಟಪಾಲ್ ಗಣೇಶ್ ಬಿಜೆಪಿಗೆ ಟಾಟಾ

reddy-arch-rival-tapal-ganesh-decides-to-quit-bjp
ಬಳ್ಳಾರಿ, ಜ.13: ಜಿಲ್ಲೆಯ ಗಣಿ ಉದ್ಯಮಿ ಟಪಾಲ್ ಗಣೇಶ್ ಅವರು ಬಂದಷ್ಟೇ ವೇಗವಾಗಿ ಬಿಜೆಪಿಯಿಂದ ದೂರವಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಅಪ್ಪಿಕೊಂಡಿದ್ದ ಕಾಂಗ್ರೆಸ್ಸಿನ ಟಪಾಲ್ ಗಣೇಶ್ ಇದೀಗ ಕಮಲ ಪಕ್ಷಕ್ಕೆ ಟಾಟಾ ಹೇಳಲು ನಿರ್ಧರಿಸಿದ್ದಾರೆ.

ಜನವರಿ 16ರಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿರುವ ಗಣೇಶ್, ಮುಂದೆ ಯಾವ ಪಕ್ಷ ಸೇರಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

'ಬಿಜೆಪಿಯಲ್ಲಿ ಜಾತಿ ರಾಜಕಾರಣ ಮಿತಿಮೀರಿದೆ. ನಿಷ್ಠಾವಂತರಿಗೆ ಇಲ್ಲಿ ಸ್ಥಾನವಿಲ್ಲ. ಭ್ರಷ್ಟರಿಗೆ ಮಣೆ ಹಾಕಲಾಗುತ್ತದೆ ಎಂದು ದೂರಿರುವ ಟಪಾಲ್, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ರೆಡ್ಡಿ ಸೋದರರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹಿಂಜರಿಯುತ್ತಿದೆ. ಅಕ್ರಮ ಗಣಿಗಾರಿಕೆಯನ್ನು ಖಂಡಿಸಲೂ ಪಕ್ಷ ಮುಂದಾಗಿಲ್ಲ. ಇದು ನನಗೆ ವಿಪರೀತ ಮುಜುಗರ ತಂದಿದೆ' ಎಂದು ಕಾರಣ ಹೇಳಿ ಬಿಜೆಪಿ ಮನೆಯಿಂದ ಅವರು ಕಾಲು ಹೊರಗಿಟ್ಟಿದ್ದಾರೆ.

ಪ್ರಮುಖ ಗಣಿ ಉದ್ಯಮಿ, ರೆಡ್ಡಿಗಳ ಕಡು ವಿರೋಧಿ ಟಪಾಲ್‌ ಗಣೇಶ್‌ ಅವರು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪ ಚುನಾವಣೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಮಾಗಿಯ ಚಳಿಯಲ್ಲಿ ಕಮಲ ಪಕ್ಷವನ್ನು ಅಪ್ಪಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+