ಶುಭ್ ಜ್ಯುವೆಲ್ಲರಿ ಆದಾಯ ಶೇ 223ರಷ್ಟು ಜಿಗಿತ!

ದೀಪಾವಳಿ ಹಾಗೂ ಕ್ರಿಸ್ ಮಸ್ ಸಮಯದಲ್ಲಿ ಸುಮಾರು 75 ಶುಭ್ ಜ್ಯುವೆಲ್ಲರಿ ರೀಟೈಲ್ ಮಳಿಗೆಗಳಲ್ಲಿ ನಿರೀಕ್ಷೆಗಿಂತ 90 ಕೋಟಿ ಅಧಿಕ ಲಾಭ ಸಿಕ್ಕಿದೆ. ಸುಮಾರು ಎರಡು ವಾರಗಳಲ್ಲಿ 37616 ಗ್ರಾಹಕರೊಡನೆ ವ್ಯವಹರಿಸಿರುವ ಸಂಸ್ಥೆ 330 ಕೆಜಿಗೂ ಅಧಿಕ ಆಭರಣಾಗಳನ್ನು ಬಿಕರಿ ಮಾಡಿದೆ.
67414 ತುಂಡು ಆಭರಣಗಳು ಹಾಗೂ 28454 ಮಾರ್ಪಾಟುಗಳು ಈ ಅವಧಿಯಲ್ಲಿ ದಾಖಲಾಗಿದೆ.
ಒಟ್ಟಾರೆ ಶೇ 223ರಷ್ಟು ಅಧಿಕ ಮಾರಾಟ ದಾಖಲಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 215ರಷ್ಟು ಅಧಿಕ ಪ್ರಗತಿ ಕಂಡಿದೆ.
ದಕ್ಷಿಣ ಭಾರತದಲ್ಲಿ ಡಾ.ವಿಷ್ಣುವರ್ಧನ್ ಹಾಗೂ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿಸಿಕೊಂಡು ಸಂಸ್ಥೆ ಅಧಿಕ ಲಾಭ ಪಡೆದಿದೆ. ಇದಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಸಂಸ್ಥೆ ಚೇರ್ ಮನ್ ರಾಜೇಶ್ ಮೆಹ್ತಾ ಹೇಳಿದ್ದಾರೆ.
ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಸುಮಾರು 2000ಕ್ಕೂ ಅಧಿಕ ಮದುವೆ ಸಂಬಂಧಿಸಿದ ಆಭರಣಗಳ ವಿನ್ಯಾಸವನ್ನು ರೂಪಿಸುತ್ತಿದೆ.












Click it and Unblock the Notifications