ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಮೂಗುದಾರ ಹಾಕಲು ಅಸಾಧ್ಯ!

By Mahesh
|
Google Oneindia Kannada News

BS Yeddyurappa and Eshwarappa
ಬೆಂಗಳೂರು, ಜ.11: ಯಡಿಯೂರಪ್ಪ ಅವರಿಗೆ ಆರೆಸ್ಸೆಸ್ ಮೂಗುದಾರ ಹಾಕಲು ಯತ್ನಿಸುತ್ತಿದ್ದು ಇದು ಎಂದಿಗೂ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಬೆಂಬಲಿಗರು ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಯಡಿಯೂರಪ್ಪ ಮಾತ್ರ ಆರೆಸ್ಸೆಸ್ ಸಭೆ ಹಾಜರಾಗಲು ಸಿದ್ಧತೆ ನಡೆಸಿದ್ದಾರೆ.

ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಅಸ್ತವ್ಯಸ್ತವಾಗಿದ್ದು, ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸರ್ಕಾರ ಉಳಿಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಒದಗಿರುವುದನ್ನು ಮನಗಂಡ ಆರೆಸ್ಸೆಸ್ ಈ ಸಭೆ ಕರೆದಿದೆ. ಯಡಿಯೂರಪ್ಪ ಅವರಿಗೂ ಮೊದಲು ಈಶ್ವರಪ್ಪ ಅವರು ಕೇಶವಕೃಪ ಬಾಗಿಲು ತಟ್ಟಿದ್ದರು ಎಂಬುದನ್ನು ಮರೆಯುವಂತಿಲ್ಲ.

ಜನವರಿ 29ರಂದು ಸಂಘದ ಹಿರಿಯ ನಾಯಕ, ಮಾಜಿ ಸರಸಂಘಚಾಲಕರಾದ ಸುದರ್ಶನ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಭೆಯ ವಿದ್ಯಮಾನಗಳನ್ನು ಅವರಿಗೆ ತಿಳಿಸಲಾಗುತ್ತದೆ.ಯಡಿಯೂರಪ್ಪ ಅವರು ಮನಸಾರೆ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ರಾಜಕೀಯ ಕಾರ್ಯದರ್ಶಿ ಹೇಳಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಕೊಂಚ ತಣ್ಣಗಾದರೂ ಅವರ ಬೆಂಬಲಿಗರು ಮುಖ್ಯಮಂತ್ರಿ ಆರೆಸ್ಸೆಸ್ ನಾಯಕರಾದ ಮೈಚ ಜಯದೇವ್, ಪ್ರಭಾಕರ್ ಭಟ್, ಮುಕುಂದ್, ರವೀಂದ್ರ, ಸತೀಶ್ ಮತ್ತು ಸಂತೋಷ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

ಹೆಚ್ಚೆಂದರೆ ಏನಾಗಬಹುದು?: ನಿರೀಕ್ಷೆಯಂತೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವಿನ ಬಿಕ್ಕಟ್ಟು ಶಮನವಾಗಲಿದೆ. ಆದರೆ, ಇದು ಯಡಿಯೂರಪ್ಪ ಅವರ ಶರಣಾಗತಿ ಎನ್ನಲಾಗದು. ಸದಾನಂದ ಗೌಡರ ಸರ್ಕಾರ ಉರುಳಿಸುವ ಯಾವ ಇರಾದೆಯೂ ಯಡಿಯೂರಪ್ಪ ಮುಂದಿಲ್ಲ.

ಸಂಕ್ರಾಂತಿ ನಂತರ ಯಡಿಯೂರಪ್ಪ ಹೊಸ ಬೇಡಿಕೆ ಪಟ್ಟಿಯೊಂದಿಗೆ ಮತ್ತೆ ಪ್ರತ್ಯಕ್ಷವಾಗುವ ಸಾಧ್ಯತೆಯಿದೆ. ಯಡ್ಡಿ ಬೆಂಬಲಿಗರಾದ ರೇಣುಕಾಚಾರ್ಯ, ಸುರೇಶ್ ಗೌಡ ಮುಂತಾದವರಿಗೆ ವಾಗ್ದಂಡನೆ ವಿಧಿಸುವ ಸಂಭವವೂ ಇದೆ. ಏನಾಗುತ್ತೋ ಕಾದು ನೋಡೋಣ...

English summary
RSS has called Senior leaders former CM Yeddyurappa and BJP State President Eshwarpppa for a much awaited meeting at Keshava Shilpa. This meeting is likely to decide fate of DV Sadananda Gowda government and Eshwarappa-Yeddyurappa will compromise but, Yeddyurappa is likely to play wait and watch game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X