ಸರ್ಜಾಪುರ ಪ್ಲಾಸ್ಟಿಕ್ ಗೋಡೌನಿನಲ್ಲಿ ಬೆಂಕಿ: ಯುವಕ ಸಜೀವ ದಹನ
ಬೆಂಗಳೂರು,
ಜ.11: ನಗರದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಗೋಡೌನಿನಲ್ಲಿ ಬುಧವಾರ ಸುಮಾರು 11.35ರಲ್ಲಿ ಬೆಂಕಿ ಹೊತ್ತಿಕೊಂಡು 30 ವರ್ಷದ ನಿರಂಜನ್ ಎಂಬ ಯುವಕ ಸಜೀವ ದಹನವಾಗಿದ್ದಾನೆ. id="toptextpromo">ಆರ್
ಆರ್ ಪ್ಲಾಸ್ಟಿಕ್ ಗೋದಾಮಿನಲ್ಲಿದ್ದ ರಾಸಾಯನಿಕ ಡಬ್ಬವನ್ನು ಕಟ್ ಮಾಡಿ ತೆಗೆಯಲು ವೆಲ್ಡಿಂಗ್ ಕಟ್ಟರ್ ಬಳಸಿದಾಗ ಅದು ಸಿಡಿದು ಸಮೀಪದಲ್ಲಿದ್ದ ಔರಂಗಾಬಾದಿನ ಯುವಕ ನಿರಂಜನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಮಿಳುನಾಡು ಮೂಲದ ಗೋದಾಮಿನ ಮಾಲೀಕ ಆರ್ಮುಗಂನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ಥಳಕ್ಕೆ
ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಫ್ಯಾಕ್ಟರಿಯಲ್ಲಿದ್ದ ಇತರೆ ಉದ್ಯೋಗಿಗಳನ್ನು ಪಾರುಮಾಡಲಾಗಿದೆ.











Click it and Unblock the Notifications