ರಕ್ತದಾನ ಮಾಡಿ ವಿವೇಕಾನಂದ ಹುಟ್ಟುಹಬ್ಬ ಆಚರಿಸಿ

Donate blood, celebrate Swami Vivekananda 150th birthday
ಬೆಂಗಳೂರು, ಜ. 11 : ಸ್ವಾಮಿ ವಿವೇಕಾನಂದ ಅವರ 150ನೇ ಹುಟ್ಟುಹಬ್ಬ ಮತ್ತು ಯುವಜನ ದಿನಾಚರಣೆಯ ಪ್ರಯುಕ್ತ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜ.12ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಲಯನ್ಸ್ ಬ್ಲಡ್ ಬ್ಯಾಂಕ್ ಜಂಟಿಯಾಗಿ ಈ ರಕ್ತದಾನ ಶಿಬಿರವನ್ನು ಏರ್ಪಾಟು ಮಾಡಿವೆ. ಕಾಲೇಜಿನ ಅಂಗಳದಲ್ಲಿ ಬೆಳಿಗ್ಗೆ 10 ಗಂಟೆಗೆ ರಕ್ತದಾನ ಆರಂಭವಾಗಲಿದೆ.

ರಕ್ತದಾನ ಮಹಾದಾನ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಬ್ಲಡ್ ಬ್ಯಾಂಕ್ ಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಯಾವತ್ತಿಗೂ ಇರುತ್ತದೆ. ಆಗಾಗ ರಕ್ತದಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ಆದರೂ, ಅನೇಕರು ರಕ್ತದಾನ ಮಾಡಲು ಹಿಂಜರಿಯುತ್ತಾರೆ.

ಯಾವುದೇ ಹಿಂಜರಿಕೆಯಿಲ್ಲದೆ ರಕ್ತದಾನ ಮಾಡಬಹುದು. ಯಾವ ಸಂದರ್ಭದಲ್ಲಿ ನೀವು ದಾನ ಮಾಡಿದ ರಕ್ತ ಯಾರ ಜೀವವನ್ನು ಉಳಿಸುವುದೋ ಬಲ್ಲವರಾರು? ಹೆಚ್ಚಿನ ವಿವರಗಳಿಗಾಗಿ ಶಿಬಿರದ ಸಂಯೋಜಕ ದೀಪಕ್ ಸುಮನ್ ಅವರನ್ನು ಸಂಪರ್ಕಿಸಿ. ಅವರ ಮೊಬೈಲ್ ಸಂಖ್ಯೆ : 9845315670.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+