ಸಂಕ್ರಾಂತಿ ನಂತರ ಯಡಿಯೂರಪ್ಪಗೆ ಪಟ್ಟ: ರೇಣುಕಾ

ಹೊನ್ನಾಳಿಯಲ್ಲಿ ನಡೆದ ಮರಿಗೆಮ್ಮ, ದುರಿಗೆಮ್ಮ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವ ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಸದಾನಂದ ಗೌಡರನ್ನು ಹಾಡಿ ಹೊಗಳಿದರು.
ಸದಾನಂದ ಗೌಡರು ಸರಳ, ಸಜ್ಜನ ರಾಜಕಾರಣಿ ಮಲೆನಾಡಿನ ಜನ ಕೊಟ್ಟ ಮಾತನ್ನು ತಪ್ಪುವುದಿಲ್ಲ. ಅದರಂತೆ ಸಂಕ್ರಾಂತಿ ನಂತರ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಕೆಎಸ್ ಈಶ್ವರಪ್ಪ ಹಾಗೂ ಬಿಎಸ್ ಯಡಿಯೂರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರ ಮಾರ್ಗದರ್ಶನದಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. ಸಂಕ್ರಾಂತಿ ನಂತರ ಬಿಜೆಪಿ ಪಕ್ಷಕ್ಕೆ ಹೊಸ ಹುರುಪು ಬರಲಿದೆ ಎಂದು ರೇಣುಕಾಚಾರ್ಯ ತಿಳಿಸಿದರು.











Click it and Unblock the Notifications