ಭಾನುವಾರದ ಕನ್ನಡಪ್ರಭ ಸಾಪ್ತಾಹಿಕ ಓದಿದಿರಾ?

ಏನಿಲ್ಲ! 150 ವರ್ಷಗಳ ಹಿಂದೆ ಜನ್ಮವೆತ್ತ ಮಹಾನ್ ಪುರುಷರೊಬ್ಬರ ಬಗ್ಗೆ ಆ ಆರು ಪುಟಗಳಲ್ಲಿ ತಿಳಿಸಿ, ಹೇಳಲಾಗಿದೆ.
ಏನು ನುರಾರು ವರುಷಗಳ ಹಿಂದಿನ ಅದೇ ಪುರಾತನ ವ್ಯಕ್ತಿಯ ಬಗ್ಗೆಯಾ ಎಂದು ಮೂಗೆಳೆಯಬೇಡಿ. ಏಕೆಂದರೆ ಆ ವ್ಯಕ್ತಿ, ಅಂದರೆ ಸ್ವಾಮಿ ವಿವೇಕಾನಂದರು ನೂರಾರು ವರ್ಷಗಳ ಹಿಂದೆ ಹೇಳಿರುವ ಮಾತುಗಳು ಇಂದಿನ ಕಾಲಮಾನಕ್ಕೂ ಅನ್ವಯವಾಗುತ್ತದೆ. ಇನ್ನೂ ಹೇಳಬೇಕೆಂದರೆ ಕುಲಗೆಟ್ಟಿರುವ ಇಂದಿನ ಕಾಲಮಾನಕ್ಕೇ ಅದು ಹೆಚ್ಚು ಪ್ರಸ್ತುತವಾಗಿದೆ.
ಏನಿಲ್ಲ! ಅದರಲ್ಲಿರುವ ನಾಲ್ಕಾರು, ಹೌದು ಹೆಚ್ಚೇನು ಬೇಡ. ನಾಲ್ಕಾರು ವಿವೇಕದ ಮಾತುಗಳನ್ನು ತಲಾ ಅಳವಡಿಸಿಕೊಂಡರೆ ನಾಡು ಸುಭಿಕ್ಷವಾದೀತು: ಬೌದ್ಧಿಕವಾಗಿ.
ಏನಿಲ್ಲ! ಇಂದಿನ ಬೌದ್ಧಿಕ ದಿವಾಳಿ ತನು, ಮನದಲ್ಲಿ ಇದರ ಜರೂರತ್ತು ಬಹಳಷ್ಟಿದೆ. ಇನ್ನು ಈ ವಾರವಿಡೀ ಎಲ್ಲೆಲ್ಲೂ ವಿವೇಕಾನಂದರ ಜಪವೇ ಇರುತ್ತದೆ. ಆದರೆ ನೀವು ವಿವೇಕಾನಂದರ ಈ 150ನೇ ಜನ್ಮ ದಿನಕ್ಕೆ (ಜ.12) ಮುನ್ನ ಈ ಮೂರೂ ದಿನಗಳಲ್ಲಿ 'ವಿವೇಕ ಪ್ರಭ'ವನ್ನು ಓದಿಕೊಂಡು, ವಿವೇಕಾನಂದರ ಬಗ್ಗೆ ಎದೆ ತಟ್ಟಿಕೊಂಡು ಮಾತನಾಡಿ.
ಏನಿಲ್ಲ ಅದರಲ್ಲಿ? ಎಲ್ಲವೂ ಇದೆ! ಸ್ಯಾಂಪಲ್: ವಿವೇಕಾನಂದರು ಅಪ್ಪಿತಪ್ಪಿಯೂ ನನ್ನಿಂದ ನೀವು ಎನ್ನುವುದಿಲ್ಲ. ನಿಮ್ಮಿಂದ ನೀವೇ ಎಂದು ತಿಳಿಯ ಹೇಳುತ್ತಾರೆ. ನಿಮ್ಮ ಅದೃಷ್ಟಕ್ಕೆ ನೀವೇ ಹೊಣೆ. ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲ ನಿಮ್ಮಲ್ಲೇ ಇದೆ. ನಿಮ್ಮ ಭವಿಷ್ಯಕಾರರು ನೀವೇ ಎನ್ನುತ್ತಾರೆ. ಸತ್ತಂತಿಹರನು ಬಡಿದೆಬ್ಬಿಸಲು ಇಷ್ಟು ಸಾಲದೇ?












Click it and Unblock the Notifications