ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಲಸಿಕೆಯಿಲ್ಲದ ಮಾರಣಾಂತಿಕ ಕ್ಷಯ?

|
Google Oneindia Kannada News

TDR - TB
ಬೆಂಗಳೂರು, ಡಿ 9: ವೈದ್ಯ ಭಾಷೆಯಲ್ಲಿ ಎಕ್ಸ್ ಡಿ ಆರ್ ಎಂದು ಗುರುತಿಸಲ್ಪಡುವ ಸಂಪೂರ್ಣ ಲಸಿಕೆ ನಿರೋಧಿ ಕ್ಷಯರೋಗದ ಸೋಂಕು ಬೆಂಗಳೂರಿನಲ್ಲಿ ವ್ಯಾಪಿಸಿದೆ ಎನ್ನುವ ವಿಷಯ ವೈದ್ಯಲೋಕವನ್ನು ಬೆಚ್ಚಿಬೀಳಿಸಿದೆ. ಇದನ್ನು ಪತ್ತೆ ಹಚ್ಚುವ ಲ್ಯಾಬ್ ಬೆಂಗಳೂರಿನಲ್ಲಿ ಇಲ್ಲ ಎನ್ನುವುದು ಇನ್ನೊಂದು ಆಘಾತಕಾರಿ ಸುದ್ದಿ.

ಬೆಂಗಳೂರಿನಲ್ಲಿ ಇದುವರೆಗೆ ಇಬ್ಬರು ಈ ಮಾರಕ ರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ಪ್ರಾಥಮಿಕ ವರದಿಯಿಂದಷ್ಟೇ ತಿಳಿದು ಬಂದಿದೆ. ಇದು ಕ್ಷಯರೋಗದ ಒಂದು ಹಂತ. ಇದು ಅಂದಾಜು ಒಂದು ಲಕ್ಷ ಕ್ಷಯ ರೋಗಿಯಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇರುತ್ತದೆ. ಇದರ ಪತ್ತೆಗೆ ಸುಸಜ್ಜಿತ ಪ್ರಯೋಗಾಲಯ ಬೇಕಾಗಿದ್ದು, ಸದ್ಯ ಇದರ ಪರಿಶೀಲನೆ ಚೆನ್ನೈ ಟಿಬಿ ಸಂಶೋಧನಾ ಕೇಂದ್ರದಲ್ಲಿ ಮಾತ್ರ ಸಾಧ್ಯ ಎಂದು ರಾಜೀವ್ ಗಾಂಧೀ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಶಶಿಧರ್ ಬುಗ್ಗಿ ಹೇಳಿದ್ದಾರೆ.

ಯಾವುದೇ ಲಸಿಕೆಗೆ ಬಗ್ಗದ ಈ ಸೋಂಕಿನ ರೋಗ ಬಂದರೆ ಸಾವೇ ಗತಿ ಎನ್ನಲಾಗುತ್ತದೆ. ಲಸಿಕೆ ಇದ್ದರೂ ಭಾರತದಲ್ಲಿ ಸಾವಿರಾರು ಮಂದಿ ಕ್ಷಯರೋಗಕ್ಕೆ ಬಲಿಯಾಗುತ್ತಿದ್ದಾರೆ. ಈಗ ಲಸಿಕೆಯಿಲ್ಲದ ವಾಸಿ ಮಾಡಲಾಗದ ಈ ಕಾಯಿಲೆಯಿಂದ ಜನರು ಆತಂಕ ಪಡುವಂತಾಗಿದೆ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮುಂಬೈ ನಗರದಲ್ಲೂ ಈ ಸೋಂಕು ಇದೆಯೆಂದು ಹೇಳಲಾಗಿದೆ.

ಸಾಧಾರಣ ಕ್ಷಯರೋಗ ಇರುವ ವ್ಯಕ್ತಿ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಲು ವಿಫಲನಾದರೆ ಯಾವ ಲಸಿಕೆಗೂ ಬಗ್ಗದ ಟಿಡಿಆರ್ ಟಿಬಿ ( Totally Drug Resistant - Tuberculosis) ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಂಬಂಧಪಟ್ಟ ಲಸಿಕೆ ತೆಗೆದುಕೊಂಡ ನಂತರ ರೋಗಿಗೆ ತಾನು ಹುಷಾರಾದ ಅನುಭವವಾದರೆ ಲಸಿಕೆ ತೆಗೆದು ಕೊಳ್ಳುವುದನ್ನು ನಿಲ್ಲಿಸುತ್ತಾನೆ. ಆದರೆ ಆಗ ಆತನ ದೇಹದಲ್ಲಿರುವ ಟಿಬಿ ಕಾರಕ ಕ್ರಿಮಿಗಳು ನಾಶವಾಗಿರುವುದಿಲ್ಲ, ಆಗ ಇಂಥಹ ಮಾರಣಾಂತಿಕ ಕಾಯಿಲೆ ಹರಡುತ್ತದೆ.

English summary
A new entity-ominously called Totally Drug-Resistant TB (TDR-TB )-has been isolated in the fluid samples of 12 TB patients in the past three months alone at Hinduja Hospital and two suspected in Bangalore recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X