ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಎನ್ನಾರೈಗಳಿಗೆ ಮತದಾನ ಹಕ್ಕು : ಪ್ರಧಾನಿ

By Mahesh
|
Google Oneindia Kannada News

NRIs get voting rights
ಜೈಪುರ, ಜ.8: ಅನಿವಾಸಿ ಭಾರತೀಯರಿಗೆ ಭಾರತದ ಚುನಾವಣೆಗಳಲ್ಲಿ ಮತದಾನದ ಹಕ್ಕು ನೀಡುವ ಬಗ್ಗೆ ಯುಪಿಎ ಸರ್ಕಾರ ಮತ್ತೊಮ್ಮೆ ಘೋಷಿಸಿದೆ. ಆದರೆ, ಭಾನುವಾರ ಎನ್ನಾರೈಗಳಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಪ್ರಧಾನಿ ಮನ ಮೋಹನ್ ಸಿಂಗ್ ಅವರು ಹೇಳಿದ್ದು, ವಿಪಕ್ಷಗಳಿಗೆ ಕೊಂಚ ಉರಿ ತಂದಿದೆ.

ಮುಂಬರುವ ಅಸೆಂಬ್ಲಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಭರವಸೆಗಳು, ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿದೆ.

ಅದು ಏನೇ ಇರಲಿ, ಸಾರ್ವಜನಿಕ ಪ್ರಾತಿನಿಧಿಕ ಕಾಯ್ದೆ 1950ಗೆ ತಿದ್ದುಪಡಿ ತಂದು ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಹೀಗಾಗಿ ಎನ್ನಾರೈಗಳು ಶೀಘ್ರದಲ್ಲೇ ಭಾರತದ ರಾಷ್ಟ್ರೀಯ ಚುನಾವಣೆಗಳಲ್ಲಿ ತಮ್ಮ ಮತ ಚಲಾಯಿಸಬಹುದು ಎಂದು ಪ್ರಧಾನಿ ಮನ ಮೋಹನ್ ಸಿಂಗ್ ಹೇಳಿದ್ದಾರೆ.

ಪ್ರವಾಸಿ ಭಾರತೀಯ ದಿವಸ್ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು.

2012ರ ಆರ್ಥಿಕ ವರ್ಷದಲ್ಲಿ ಅನಿವಾಸಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ನೀಡಲಾಗುವುದು, ಈ ಮೂಲಕ ಹೊಚ್ಚ ಹೊಸ ಭಾರತ ನಿರ್ಮಾಣಕ್ಕೆ ನಾಂದಿ ಹಾಡಾಗುವುದು ಎಂದು ಮನ ಮೋಹನ್ ಸಿಂಗ್ ಹೇಳಿದರು.

English summary
India on Sunday, Jan 8 said that Non-resident Indias would be allowed to vote and participate in the election process. prime minister Man Mohan Singh while addressing the annual diaspora meet (Pravasi Bharatiya Divas)said the government has issued notifications for registration of overseas electors under the Representation of People Act, 1950.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X