ಹೈಕಮಾಂಡ್ ವಿರುದ್ಧ ರಾಜ್ಯ ಪ್ರವಾಸಕ್ಕೆ ಬಿಎಸ್ ವೈ ಸಜ್ಜು
ಬೆಂಗಳೂರು,
ಜ. 7: "ನಾನೇಕೆ ದೆಹಲಿಗೆ ಹೋಗಲಿ, ಬೇಕಿದ್ದರೆ ವರಿಷ್ಠರೆ ಬರಲಿ" ಎಂಬ ತತ್ವವನ್ನು ಅನುಸರಿಸಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಇಂದಿನಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಶಿವಮೊಗ್ಗದಲ್ಲಿ ಮೊದಲು ಸಭೆ ನಡೆಸುವ ಮೂಲಕ ಚಾಲನೆ ನೀಡಲಿರುವ ಅವರು ರಾತ್ರಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. id="toptextpromo">ಭಾನುವಾರ
ತಮ್ಮ ಆಪ್ತರು, ಬೆಂಬಲಿಗರ ಸಭೆ ನಡೆಸಿದ ನಂತರ ಮತ್ತೆ ಪ್ರವಾಸ ಮುಂದುವರಿಸಲಿದ್ದಾರೆ. ತಮಗೆ ಸೂಕ್ತ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿರುವ ವರಿಷ್ಠರಿಗೆ ಈ ಮೂಲಕ ಉತ್ತರ ನೀಡಲು ಅವರು ಮುಂದಾಗಿದ್ದಾರೆ. ರಾಜ್ಯ ಪ್ರವಾಸ ಕೈಗೊಳ್ಳುವುದು ಬೇಡ ಎಂಬ ವರಷ್ಠರ ಬೇಡಿಕೆಗೆ ಯಡಿಯೂರಪ್ಪ ಸಡ್ಡು ಹೊಡೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಯಾವುದೇ
ಸ್ಥಾನಮಾನ ಕೊಡಿ ಎಂದು ನಾನು ಯಾರನ್ನೂ ಕೇಳುತ್ತಿಲ್ಲ. ಅದಕ್ಕಾಗಿ ದೆಹಲಿಗೆ ಹೋಗುವುದೂ ಇಲ್ಲ. ಅಗತ್ಯವಿದ್ದರೆ ರಾಷ್ಟ್ರೀಯ ನಾಯಕರೇ ಇಲ್ಲಿಗೆ ಆಗಮಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬಿಜೆಪಿ ರಾಜ್ಯಕ್ಕೆ ಅನಿವಾರ್ಯ, ಆದರೆ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಲ್ಲ" ಎಂದು ಮಾರ್ಮಿಕವಾಗಿ ಹೇಳಿರುವ ಯಡಿಯೂರಪ್ಪ ಮಾತಿನಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.











Click it and Unblock the Notifications