ಉಡುಪಿ ಶ್ರೀಸೋದೆ ವಾದಿರಾಜಮಠದ ವೆಬ್‌ಸೈಟ್‌ಗೆ ಚಾಲನೆ
ಉಡುಪಿ,
ಜ.4: ಇಲ್ಲಿನ ರಥಬೀದಿಯಲ್ಲಿರುವ ಶ್ರೀಸೋದೆ ವಾದಿರಾಜ ಮಠದ ವೆಬ್‌ಸೈಟ್‌ಗೆ ಸೋಮವಾರ (ಜ. 2) ಚಾಲನೆ ನೀಡಲಾಗಿದೆ. ಶ್ರೀಸೋದೆ ಮಠದ ವೆಬ್‌ಸೈಟ್ ವಿಳಾಸ ಇಂತಿದೆ: www.sodevadirajamutt.in id="toptextpromo">ಶ್ರೀಮಠದ
ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರೇಂದ್ರಕುಮಾರ್ ಗುಣಕಿ ಬಿಡುಗಡೆಗೊಳಿಸಿದರು. ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪ್ರಮೋದ್ ಮಧ್ವರಾಜ್, ಪಾಡಿಗಾರು ಶ್ರೀನಿವಾಸ ತಂತ್ರಿ, ಮದ್ವೇಶ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. id='are-slot-1' class='oiad oi-axt oiadv'> id='top-searched-articles'>ಶ್ರೀಮಠಕ್ಕೆ
ಸಂಬಂಧಿಸಿದ ಆಯಾ ದಿನದ ಚಟುವಟಿಕೆಯ ಭಾವಚಿತ್ರಗಳನ್ನು ಆಯಾ ದಿನದ ಸಂಜೆಯೇ ಅಂತರ್ಜಾಲ ತಾಣಕ್ಕೆ ಅಳವಡಿಸಲಾಗುವುದು. ಇಲ್ಲಿನ ವಿಶೇಷತೆ ಎಂದರೆ ಇದನ್ನು ಆಸಕ್ತ ಸಂಸ್ಥೆಗಳು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಮಠದ ವಿವಿಧ ಅಮೂಲ್ಯ ಮಾಹಿತಿಗಳನ್ನು ಕೊಡಲಾಗಿದೆ. ಜನತಾ ಪಬ್ಲಿಸಿಟಿ ಜಾಹೀರಾತು ಸಂಸ್ಥೆಯ ಮಾಲೀಕ ಹರ್ಷರಾಜ ಜೆ. ಶೆಟ್ಟಿ ವೆಬ್‌ಸೈಟ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದಾರೆ.











Click it and Unblock the Notifications