• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಪ್ 10 ಚಿನ್ನ ಉತ್ಪಾದನಾ ರಾಷ್ಟ್ರ-ಚೀನಾ-1

By Mahesh
|
Top 10 gold producing countries
ವಿವಿಧ ಜಾಗತಿಕ ಕಾರಣಗಳಿಂದಾಗಿ ಆರ್ಥಿಕ ಮಾರುಕಟ್ಟೆ ಕುಸಿತ ದಾಖಲಿಸಿದ್ದು ತಮ್ಮ ಹೂಡಿಕೆಗೆ ಚಿನ್ನ ಅತ್ಯುತ್ತಮ ಮಾರ್ಗವೆಂದು ಹೂಡಿಕೆದಾರರು ಪರಿಗಣಿಸಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಏರುಮುಖವಾಗಿಯೇ ಇದೆ.

ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಹರುಷವನ್ನು ತಂದಿದೆಯಾದರೂ ಖರೀದಿದಾರರಿಗೆ ತೀವ್ರ ಕಹಿ ಆಗಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿ ಈ ಕೆಳಗಿನಂತಿದೆ.

1) ಚೀನಾ : ಇತ್ತೀಚಿನ ವರ್ಷಗಳಲ್ಲಿ ಪ್ರಬಲ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಚೀನಾ ವಿಶ್ವದ ಅತ್ಯಂತ ಹೆಚ್ಚು ಚಿನ್ನ ಉತ್ಪಾದಿಸುವ ದೇಶವಾಗಿದ್ದು ಇಲ್ಲಿ ವಾರ್ಷಿಕ 3.2 ಲಕ್ಷ ಕೆಜಿಗಳಷ್ಟು ಚಿನ್ನ ಉತ್ಪಾದನೆ ಆಗುತ್ತಿದೆ.

ಚೀನಾ ವಿಶ್ವದ ಅತೀ ದೊಡ್ಡ ಚಿನ್ನದ ರಫ್ತುದಾರ ಹಾಗೂ ಎರಡನೇ ಅತೀ ದೊಡ್ಡ ಆಮದುದಾರ ರಾಷ್ಟ್ರವೂ ಆಗಿದೆ. ಅಮೇರಿಕಾದ ನಂತರ ಚೀನಾ ವಿಶ್ವದ ಎರಡನೇ ಅತೀ ಹೆಚ್ಚು ಜಿಡಿಪಿ ಹಾಗೂ ಖರೀದಿ ಶಕ್ತಿ ಹೊಂದಿರುವ ರಾಷ್ಟ್ರವೂ ಆಗಿದೆ.

2009 ರ ಜಾಗತಿಕ ಆರ್ಥಿಕ ಹಿಂಜರಿತ ಬಹುತೇಕ ರಾಷ್ಟ್ರಗಳಿಗೆ ಶಾಪವಾಗಿದ್ದರೆ ಚೀನಾ ಕ್ಕೆ ಬೆಳವಣಿಗೆಯ ಅವಕಾಶ ಹೆಚ್ಚಿಸಿದೆ. ಅಪಾರ ಪ್ರಮಾಣದ ವಿದೇಶೀ ಮೀಸಲು ಹೊಂದಿರುವ ಚೀನಾ ತನ್ನ ತೈಲ, ಲೋಹ ಹಾಗೂ ಖನಿಜ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕತೆಯನ್ನು ಉತ್ತಮಪಡಿಸಿಕೊಂಡಿದೆ.

2) ಅಮೇರಿಕ: ವಿಶ್ವದ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯೂ ಆಗಿರುವ ಅಮೇರಿಕದ ಚಿನ್ನದ ವಾರ್ಷಿಕ ಉತ್ಪಾದನೆ 2.23 ಲಕ್ಷ ಕೆಜಿಗಳಾಗಿವೆ. ಅಮೇರಿಕಾದ ಒಟ್ಟು ಜಿಡಿಪಿ 15 ಟ್ರಿಲಿಯನ್ ಡಾಲರ್ ಗಳಾಗಿದ್ದು ಇದರಲ್ಲಿ ಶೇ.23 ರಷ್ಟು ಚಿನ್ನ ಆಗಿದೆ.

ಅಮೇರಿಕ ವಿಶ್ವದ ಅತ್ಯಂತ ದೊಡ್ಡ ಸರಕುಗಳ ಆಮದುದಾರ ರಾಷ್ಟ್ರವೂ ಆಗಿದೆ. 2010 ರಲ್ಲಿ ಅಮೇರಿಕದ ವ್ಯಾಪಾರ ಕೊರತೆ 634.9 ಬಿಲಿಯನ್ ಡಾಲರ್ ಗಳಾಗಿತ್ತು. ಅಮೇರಿಕದ ಡಾಲರ್ ಜಾಗತಿಕ ಪ್ರಾಥಮಿಕ ಮೀಸಲು ಕರೆನ್ಸಿ ಆಗಿದೆ.

3) ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ವಿಶ್ವದ 13 ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದು , ವಿಶ್ವದ 7 ನೇ ಅತೀ ದೊಡ್ಡ ತಲಾ ಆದಾಯ ಹೊಂದಿರುವ ರಾಷ್ಟ್ರವೂ ಆಗಿದೆ.ಇದರ ವಾರ್ಷಿಕ ಚಿನ್ನ ಉತ್ಪಾದನೆ 2.22 ಲಕ್ಷ ಕೆಜಿಗಳಾಗಿದ್ದು ಸರ್ಕಾರ 190 ಬಿಲಿಯನ್ ಡಾಲರ್ ಗಳಷ್ಟು ಸಾಲವನ್ನೂ ಹೊಂದಿದೆ.

ಆಸ್ಟ್ರೇಲಿಯಾದಲ್ಲಿ ಗೃಹ ದರಗಳು ದುಬಾರಿಯಾಗಿದ್ದು ಪ್ರವಾಸೋದ್ಯಮ, ಶಿಕ್ಷಣ, ಹಣಕಾಸು ಸೇವೆ, ಜಿಡಿಪಿಯಲ್ಲಿ ಶೇ.70 ರಷ್ಟು ಪಾಲನ್ನು ಹೊಂದಿವೆ.

ಮುಂದಿನ ಸ್ಥಾನದಲ್ಲಿ ಯಾವ ರಾಷ್ಟ್ರಗಳಿವೆ ನೋಡೋಣ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The list of the global top 10 gold producing countries. Data source is the British Geological Survey report on World Mineral Production, 2005-2009. Volumes and world percentage share have changed dramatically over the last twenty years. India stands at 51th position.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more