ಶಬರಿಮಲೆ ದೇಗುಲ ದಾಖಲೆ ಆದಾಯ 114ಕೋಟಿ ರು

ಅರವಣ ಪ್ರಸಾದಂ ಮೂಲಕ 48.97 ಕೋಟಿ ರು ಆದಾಯ ಹಾಗೂ ಹುಂಡಿಯಲ್ಲಿ ಸಿಕ್ಕಿರುವ ಮೊತ್ತ 41.58 ಕೋಟಿ ರು ದಾಟಿದೆ ಎಂದು ದೇಗುಲ ಸಮಿತಿ ಹೇಳಿದೆ.
ಶಬರಿಮಲೆ ದೇಗುಲದ ಆದಾಯ 77.72 ಕೋಟಿ ರು ದಾಟಿದೆ ಎಂದು ಇತ್ತೀಚೆಗೆ ಒನ್ ಇಂಡಿಯಾದಲ್ಲಿ ವರದಿ ಮಾಡಲಾಗಿತ್ತು. ಇದಾದ ಕೆಲ ದಿನಗಳ ನಂತರ ದೇಗುಲದ ಪ್ರಸ್ತುತ ಋತುವಿನ ಆದಾಯದ ಮೊತ್ತ 114 ಕೋಟಿ ರು ದಾಟಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.
ಕಳೆದ ವರ್ಷ ಸುಮಾರು 58.78 ಕೋಟಿ ಗಳಿಸಿದ್ದ ಶಬರಿಮಲೆ ದೇಗುಲ ಈಗ ಎಲ್ಲಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ.
ಮುಲ್ಲಪೆರಿಯಾರ್ ಅಣೆಕಟ್ಟು ವಿವಾದದಿಂದಾಗಿ ಕೇರಳ ಹಾಗೂ ತಮಿಳುನಾಡು ನಡುವೆ ಘರ್ಷಣೆಗಳು ನಡೆದು, ತಮಿಳು ಭಕ್ತರು ದೇಗುಲಕ್ಕೆ ಹೋಗದೆ ಮನೆಗೆ ಹಿಂತಿರುಗಿದ ಪ್ರಸಂಗ ಕೂಡಾ ನಡೆದಿತ್ತು.
ಆದರೂ ಭಕ್ತಾದಿಗಳಿಂದ ತುಂಬು ತುಳುಕಿದ ಶಬರಿಮಲೆ ಉತ್ತಮ ಆದಾಯ ದಾಖಲಿಸಿದೆ. ಪ್ರಸ್ತುತ ಋತುವಿನ ಆದಾಯ ಗಳಿಕೆ ಸಂಕ್ರಾಂತಿ ಮುಗಿಯುವವರೆಗೂ ಇದೇ ರೀತಿ ಮುಂದುವರೆಯುವ ನಿರೀಕ್ಷೆಗಳಿದೆ.












Click it and Unblock the Notifications