Get Updates
Get notified of breaking news, exclusive insights, and must-see stories!

ಸಾರೆಕೊಪ್ಪ ಬಂಗಾರಪ್ಪ ಜೀವನ ಅವಲೋಕನ

S Bangarappa
ಶಿವಮೊಗ್ಗ, ಡಿ.27 : ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಜೆ ಎಚ್ ಪಟೇಲ್ ರಂತೆ ವರ್ಣಮಯ ವ್ಯಕ್ತಿತ್ವ ಹಾಗೂ ಭಾಷಾ ಪ್ರೌಢಿಮೆ ಹೊಂದಿದ್ದ ಸಾರೆಕೊಪ್ಪ ಬಂಗಾರಪ್ಪ ಅವರ ಜೀವನ ಅವಲೋಕನ ಇಲ್ಲಿದೆ.

ಶಿವಮೊಗ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ ಬಂಗಾರಪ್ಪನವರು ಮೂಲತಃ ಲೋಹಿಯಾ ಚಿಂತಕರು, ಸಮಾಜವಾದಿ ತತ್ವವದಡಿ ಸಾಮಾಜಮುಖಿ ಚಿಂತನೆಯೊಂದಿಗೆ ಬಾಳಲು ಯತ್ನಿಸಿದ ಹಠವಾದಿ, ಸ್ವಾಭಿಮಾನಿ.

* 1967 ರಲ್ಲಿ ಮೊದಲ ಬಾರಿಗೆ ಸೊರಬ ಕ್ಷೇತ್ರಕ್ಕೆ ಸಂಯುಕ್ತ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
* 1972 ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ವಿಧಾನ ಸಭೆಗೆ ಮರು ಆಯ್ಕೆ.
* ನಂತರ ಸಮಾಜವಾದಿ ಪಕ್ಷ ತೊರೆದು, ಕರ್ನಾಟಕ ಜನತಾ ರಂಗ ಸ್ಥಾಪನೆ.
* 1972 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ. ಗೃಹ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಣೆ. ಗುಂಡೂರಾವ್ ಸಿಎಂ ಆಗಿದ್ದ ಕಾಲವದು.

* 1978ರಲ್ಲಿ ವಿಧಾನ ಸಭೆಗೆ ಸೊರಬದಿಂದ ಮರು ಆಯ್ಕೆ.
* ಆರ್ ಗುಂಡೂರಾವ್ ಜತೆ ಸೇರಿ ಕರ್ನಾಟಕ 'ಕ್ರಾಂತಿರಂಗ'ಮತ್ತೊಮ್ಮೆ ಸ್ಥಾಪನೆ.
* 1983 ರಲ್ಲಿ ಜನತಾ ಕ್ರಾಂತಿರಂಗ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆ.
* ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಆಯ್ಕೆಯಿಂದ ಅಸಮಾಧಾನ, ಕ್ರಾಂತಿರಂಗ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆ.
* 1985 ರಲ್ಲಿ ವಿಧಾನ ಸಭೆಗೆ ಪುನರ್ ಆಯ್ಕೆ.
* ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಕೃಷಿ, ತೋಟಗಾರಿಕೆ ಸಚಿವರಾಗಿದ್ದರು.
* 1990 ಅಕ್ಟೋಬರ್ 17 ರಂದು ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅಧಿಕಾರ ಸ್ವೀಕಾರ.
* 1992ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿ.
* 1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪನೆ.
* 1994ರ ವಿಧಾನ ಸಭೆ ಚುನಾವಣೆಯಲ್ಲಿ ಸೊರಬ, ಸಾಗರಕ್ಕೆ ಸ್ಪರ್ಧೆ, ಸಾಗರದಲ್ಲಿ ಸೋಲು, ಸೊರಬದಲ್ಲಿ ಗೆಲುವು.
* 1996ರಲ್ಲಿ ಲೋಕಸಭೆಗೆ ಆಯ್ಕೆ.
* 1997ರಲ್ಲಿ ಪುನಃ ಕಾಂಗ್ರೆಸ್‌ಗೆ ಸೇರ್ಪಡೆ.
* 1998ರಲ್ಲಿ ಮತ್ತೆ ಪಕ್ಷದಲ್ಲಿ ಅಸಮಾಧಾನ 'ಕರ್ನಾಟಕ ವಿಕಾಸ ಪಕ್ಷ' ಸ್ಥಾಪನೆ.
* 1998ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲು.

* 1999ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆ ಪ್ರವೇಶದ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್
ಸರ್ಕಾರ ಸ್ಥಾಪನೆಗೆ ಕಾರಣರಾದರು.
* 2004ರಲ್ಲಿ ಬಿಜೆಪಿ ಸೇರ್ಪಡೆ. ಬಿಜೆಪಿಯಿಂದ ಲೋಕಸಭೆಗೆ ಆಯ್ಕೆ.
* ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ, ಸಮಾಜವಾದಿ ಪಕ್ಷ ಸೇರ್ಪಡೆ.
*2005ರ ಜೂನ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್‌ಪಿಯಿಂದ ಲೋಕಸಭೆಗೆ
ಪುನರಾಯ್ಕೆ.
* 2009ರಲ್ಲಿ ಅವಧಿಗೆ ಮುನ್ನ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ, ಕಾಂಗ್ರೆಸ್
ಸೇರ್ಪಡೆ.
* 15 ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದಿಂದ ಬಂಗಾರಪ್ಪ ಸ್ಪರ್ಧೆ, ಬಿವೈ ರಾಘವೇಂದ್ರ ವಿರುದ್ಧ ಸೋಲು.
* 2010ರಲ್ಲಿ ಜೆಡಿಎಸ್ ಸೇರ್ಪಡೆ

ಪಕ್ಷದಿಂದ ಪಕ್ಷಕ್ಕೆ ಜಿಗಿದು 'ಪಕ್ಷಾಂತರಿ' ರಾಜಕಾರಣಿಯಾದರೂ, ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಸಾಹಸ ಮೆರೆದರು. ಅವರ ಪ್ರಯತ್ನ ಫಲ ಕೊಡದಿದ್ದರೂ, ಸಾಹಸ ಬಹುಮೆಚ್ಚುಗೆ ಪಡೆಯಿತು.

ಸುಮಾರು 31 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಪ್ರಥಮ ಬಾರಿಗೆ ಯಾವ ಸದನದಲ್ಲೂ ಸದಸ್ಯನಾಗದೆ ಅಧಿಕಾರ ವಂಚಿತರಾದ ಬಂಗಾರಪ್ಪ ಅವರಿಗೆ ರಾಜಕೀಯವಾಗಿ ಪುತ್ರ ವಸಂತ್ ಕುಮಾರ್(ಕುಮಾರ್ ಬಂಗಾರಪ್ಪ) ವೈರಿಯಾಗಿದ್ದು ಸಹಿಸಲು ಆಗದಂಥ ನೋವುಂಟು ಮಾಡಿತ್ತು. ಇನ್ನೊಬ್ಬ ಪುತ್ರ ಮಧುವನ್ನು ರಾಜಕೀಯವಾಗಿ ಮೇಲಕ್ಕೆ ತರಲು ಇನ್ನಿಲ್ಲದ್ದಂತೆ ಯತ್ನಿಸಿ ಸೋಲುಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+