ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ನಾನು -ಯಡಿ

bjp-leadership-eshwarappa-dvs-my-leaders-bsy
ಬೆಂಗಳೂರು, ಡಿ. 25: 'ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ನಾನೇ' ಎಂದು ಮೂರ್ನಾಲ್ಕು ದಿನದಿಂದ ಜಪಿಸುತ್ತಾ ರಾಜ್ಯ ಬಿಜೆಪಿ ನಾಯಕತ್ವದ ಜೇನುಗೂಡನ್ನು ಕದಲಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭಾನುವಾರ ದಿಢೀರನೆ ತಮ್ಮ ರಾಗ ಬದಲಿದ್ದಾರೆ. ಸದಾನಂದ ಗೌಡರೇ ನಮ್ಮ ಅಧಿಕೃತ ನಾಯಕರು ಮತ್ತು ಕೆಎಸ್ ಈಶ್ವರಪ್ಪ ರಾಜ್ಯ ಬಿಜೆಪಿಯ ಅಧಿನಾಯಕ ಎಂದು ತಮ್ಮ ಮಾತುಗಳನ್ನು ತಾವೇ ನುಂಗಿದ್ದಾರೆ.

'ನಾನು ವಿಷಕಂಠ; ಕಂಟಕನಲ್ಲ. ಕಂಟಕಗಳೇನೇ ಇದ್ದರೂ ನಾನೇ ನಿಭಾಯಿಸುತ್ತೇನೆ' ಎಂದು ಈ ಹಿಂದೆ ಹೇಳಿದ್ದ ಯಡಿಯೂರಪ್ಪ ಈಗಲೂ ವಿಷಕಂಠನಾಗಿ ಸದ್ಯಕ್ಕೆ ನೋವು, ಅವಮಾನಗಳನ್ನು ಸಹಿಸಿಕೊಂಡಿದ್ದಾರೆ. ಆದರೆ ಸಂಧಿಕಾಲದಲ್ಲಿ ಯಡಿಯೂರಪ್ಪನವರ ಈ ಮತುಗಳು ಯಾವುದರ ಮುನ್ಸೂಚನೆಯೋ ಕಾಲವೇ ಹೇಳಬೇಕು.

'ರಾಜ್ಯ ಬಿಜೆಪಿಗೆ ನಾನೇ ಯಜಮಾನ ಎಂದು ಯಾವತ್ತೂ ಹೇಳಿಲ್ಲ. ಮನೆಯಾಗಲಿ, ಸಂಘ- ಸಂಸ್ಥೆಯಾಗಲಿ, ರಾಜಕೀಯ ಪಕ್ಷವೇ ಆಗಲಿ, ಅದಕ್ಕೆ ಒಂದು ಶಕ್ತಿಕೇಂದ್ರವಿರಬೇಕು. ಆಗ ಮಾತ್ರ ಆ ಮನೆ ಅಥವಾ ಸಂಘ-ಸಂಸ್ಥೆ ಅಥವಾ ರಾಜಕೀಯ ಪಕ್ಷ ಸಂಘಟಿತವಾಗಿ ಯಶಸ್ಸಿನತ್ತ ಮುನ್ನಡೆಯಲು, ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದ್ದೆ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಈಶ್ವರಪ್ಪನವರೂ ಯಾರದ್ದೋ ಮಾತು ಕೇಳಿ ಪ್ರತಿಕ್ರಿಯಿಸುತ್ತಿದ್ದಾರೆ' ಎಂದು ಸನ್ಮಾನ್ಯ ಯಡಿಯೂರಪ್ಪನವರು ರಾಗ ಬದಲಿದ್ದಾರೆ.

'ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹಿಂದೆಯೇ ಕಾರ್ಯನಿರ್ವಹಿಸಿದ್ದೇನೆ. ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದಾಗಿದೆ. ಸಿಎಂ ಪಟ್ಟ ಅಥವಾ ರಾಜ್ಯಾಧ್ಯಕ್ಷ ಹುದ್ದೆ ನನಗೇ ಬೇಕೆಂದು ಪಕ್ಷದ ವರಿಷ್ಠರ ಬಳಿ ಪಟ್ಟು ಹಿಡಿದಿದ್ದೇನೆ ಎಂಬ ಮಾಹಿತಿ ಸುಳ್ಳು' ಎಂದೂ ಅವರು ಸ್ಪಷ್ಟಪಡಿಸಿದರು.

'ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಸಂಘಟನೆಗಾಗಿ ದುಡಿಯುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 150 ಸ್ಥಾನ ತಂದುಕೊಡುತ್ತೇನೆ' ಎಂದೂ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+