ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ - ಅನಧಿಕೃತ ಸಿಎಂ ಯಡಿಯೂರಪ್ಪ

no-cabinet-reshuffle-now-yeddyurappa
ಬೆಂಗಳೂರು, ಡಿ. 25: ಮೇಲ್ಮನೆ ಗೆಲುವಿನ ಬಳಿಕ ಖುದ್ದು ಹೈಕಮಾಂಡ್ ಆಶೀರ್ವಾದ ಪಡೆದು ನಾನೇ ಅಧಿಕೃತ ಮುಖ್ಯಮಂತ್ರಿ ಎಂದು ರಾಷ್ಟ್ರದ ರಾಜಧಾನಿಯಲ್ಲಿ ನಾಡಿನ ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿಕೆ ನೀಡಿದ್ದೇ ಬಂತು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ಪಿತ್ಥ ನೆತ್ತಿಗೇರಿದವರಂತೆ ಆಡುತ್ತಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಯಡಿಯೂರಪ್ಪನವರು ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೌಡರಿಗೇ ಟಿಕೆಟ್ ಕೊಟ್ಟಿದ್ದಾರೆ! ಸ್ಥಳೀಯ ಪತ್ರಕರ್ತರು ಜಿಲ್ಲೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 'ಮುಂದಿನ ಸಂಪುಟ ವಿಸ್ತರಣೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತೋ?' ಎಂದು ಸನ್ಮಾನ್ಯ ಯಡಿಯೂರಪ್ಪನವರನ್ನು ಕಿಚಾಯಿಸಿದ್ದಾರೆ.

ಅದಕ್ಕೆ 'ಅನಧಿಕೃತ ಸಿಎಂ' ಯಡಿಯೂರಪ್ನೋರು 'ಅದೆಲ್ಲಾ ಆಗಾಕಿಲ್ಲ. ಸಂಪುಟ ವಿಸ್ತರಣೆ ಸದ್ಯಕ್ಕೆ ಆಗೊಲ್ಲ' ಎಂದು ಧನುರ್ಮಾಸದ ಚಳಿಯಲ್ಲಿ ಕೆಂಡದಂತ ಮಾತು ಹೇಳಿದ್ದಾರೆ. ಹೇಳಿ ಕೇಳಿ ಸಂಪುಟ ವಿಸ್ತರಣೆ ಎಂಬುದು ಮುಖ್ಯಮಂತ್ರಿಯ ಪರಾಮಾಧಿಕಾರ. ಆದರೆ ಯಡಿಯೂರಪ್ಪನವರು ಹೇಗೆ ಅಷ್ಟೊಂದು ಖಚಿತವಾಗಿ ಸಂಪುಟ ವಿಸ್ತರಣೆ ಆಗುವುದಿಲ್ಲ ಅಂದರೋ ಆ ಯಡಿಯೂರು ಸಿದ್ದಲಿಂಗೇಶ್ವರನೇ ಬಲ್ಲ.

ಈಗಾಗಲೇ ರಾಜ್ಯ ಬಿಜೆಪಿ ನಾಯಕತ್ವದ ಕುರಿತು ಯಡಿಯೂರಪ್ಪ ಹಾಕಿರುವ ಕಾಡಿನ ಬೆಂಕಿಯಲ್ಲಿ ಸರಿಯಾಗಿ ಉರಿದುಕೊಳ್ಳುತ್ತಿರುವ ಸದಾನಂದ ಗೌಡ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಇದಕ್ಕೆ ಯಾವ ಪ್ರತಿಕ್ರಿಯೆ ನೀಡುತ್ತಾರೋ ಕಾದುನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+