ವಿಕ್ರಂನಿಂದ ಶಾಲಾ ಮಕ್ಕಳಿಗೆ ಉಚಿತ ಹೃದಯ ಚಿಕಿತ್ಸೆ
ಮೈಸೂರು,
ಡಿ. 24: ಮೈಸೂರಿನ ವಿಕ್ರಂ ಆಸ್ಪತ್ರೆ ಸರ್ಕಾರದೊಂದಿಗೆ ಕೈಜೋಡಿಸಿ ಶಾಲಾ ಮಕ್ಕಳಿಗೆ ಉಚಿತ ಹೃದಯ ಚಿಕಿತ್ಸೆಯನ್ನು ನೀಡುವ ಯೋಜನೆಯನ್ನು ಕೈಗೊಂಡಿದೆ. id="toptextpromo">2011ರ
ಜನವರಿಯಿಂದ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಹೃದಯ ಚಿಕಿತ್ಸೆ ನೀಡಲಾಗಿದ್ದು, 16 ವರ್ಷದ ಕೆಳಗಿನ ಸುಮಾರು 2500 ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ, ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ಖಾಸಗಿ ಶಾಲೆಗಳ ಮಕ್ಕಳೂ ಇದರಿಂದ ಅನೇಕ ಪ್ರಯೋಜನ ಕಂಡುಕೊಂಡಿರುವುದಾಗಿ ಆಸ್ಪತ್ರೆಯ ಹೃದಯ ತಜ್ಞ ಉಪೇಂದ್ರ ಶಣೈ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶೇಕಡಾ
1 ರಷ್ಟು ನವಜಾತ ಶಿಶುಗಳಲ್ಲಿ ಹುಟ್ಟುತ್ತಲೇ ಹೃದಯ ಸಂಬಂಧಿ ಸಮಸ್ಯೆಗಳು ಇರುತ್ತವೆ. ಆದ್ದರಿಂದ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ಯೋಜನೆಯಡಿಯಲ್ಲಿ 151 ಹೃದಯ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ಈ ಬಗ್ಗೆ ಇನ್ನಷ್ಟು ಜಾಗೃತಿಯ ಅವಶ್ಯಕತೆಯಿದೆ ಎಂದು ಆಸ್ಪತ್ರೆಯ ವೈದ್ಯ ಸುಜಯ್ ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications