ಅಕ್ಕುಂಜಿಗೆ 1ವರ್ಷ ನಿಷೇಧ: ಒಲಂಪಿಕ್ಸ್ ಆಸೆ ಜೀವಂತ

ನ್ಯಾ. ದೀನೇಶ್ ದಯಾಳ್ ನೇತೃತ್ವದ ಶಿಸ್ತು ಸಮಿತಿ ಸಂಶದ ಲಾಭನ್ನು ಕ್ರೀಡಾಳುಗಳತ್ತ ವಾಲಿಸಿದ್ದು, ನಿಷೇಧದ ಅವಧಿ ಕೇವಲ ಒಂದು ವರ್ಷದ್ದಾಗಿರುವುದರಿಂದ ಮುಂದಿನ ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಜೀವಂತವಾಗಿದೆ.
ಈ ಮಧ್ಯೆ, ನಿಷೇಧದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ. ಒಂದು ವರ್ಷದ ನಿಷೇಧದ ಅವಧಿಯಲ್ಲಿ ತಮ್ಮ ಪುತ್ರಿ ಅಶ್ವಿನಿ ಪೂರ್ಣಾಭ್ಯಾಸ ಮಾಡಿ, ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವತ್ತ ಗಮನ ಕೇಂದ್ರೀಕರಿಸುವುದಾಗಿ ಅಶ್ವಿನಿ ಅವರ ಅಪ್ಪ ಸ್ಪಷ್ಟಪಡಿಸಿದ್ದಾರೆ.
ಜುಲೈ 5ರಂದು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಅಶ್ವಿನಿ ಅಕ್ಕುಂಜಿಗೆ ನಿಷೇಧ ವಿಧಿಸಲಾಗಿತ್ತು. ಇದರಿಂದ ಅವರು ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿಲ್ಲವಾದರೂ ಲಂಡನ್ ಒಲಂಪಿಕ್ಸ್ ನತ್ತ ತಮ್ಮ ಗುರಿ ನೆಟ್ಟಿದ್ದು, ಸತತ ಅಭ್ಯಾಸದಲ್ಲಿ ತೊಡಗಿದ್ದಾರೆ.











Click it and Unblock the Notifications