ಪೇಜಾವರ ವಿರುದ್ದ ನಿಡುಮಾಮಿಡಿ ಶ್ರೀ ಚುಚ್ಚು ಮಾತು

ಮಡೆಸ್ನಾನದ ವಿರುದ್ದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತಿದ್ದ ನಿಡುಮಾಮಿಡಿ ಶ್ರೀಗಳು, ವಿಶ್ವೇಶ್ವರತೀರ್ಥರು ಮೂಲಭೂತವಾದಿಗಳು. ಒಂದು ಕಡೆ ಹಿಂದೂ ಧರ್ಮದ ಸಮಗ್ರತೆಯ ಬಗ್ಗೆ ಮಾತನಾಡುವ ಅವರು ಸಹಪಂಕ್ತಿ ಭೋಜನ, ಮಡೆ ಮಡೆಸ್ನಾನ ಮುಂತಾದ ಪದ್ಧತಿ ಆಚರಣೆ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಾರೆ ಎಂದು ಕಟು ಮಾತಿನಲ್ಲಿ ಪೇಜಾವರ ಶ್ರೀಗಳನ್ನು ಟೀಕಿಸಿದ್ದಾರೆ.
ಮನುಷ್ಯ ಮನುಷ್ಯರನ್ನು ಒಂದೇ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡಲು ಅವಕಾಶ ನೀಡದವರು ಹಿಂದೂ ಧರ್ಮದ ಐಕ್ಯತೆ ಬಗ್ಗೆ ಮಾತನಾಡುವುದು ತಮಾಷೆ ಎನಿಸುತ್ತದೆ. ಶ್ರೀಗಳು ಸಮಾಜದಲ್ಲಿ ಯಾವ ಸುಧಾರಣೆ ಮಾಡಲು ಹೊರಟಿದ್ದಾರೆ, ಇವರಿಗೆ ಪ್ರಚಾರ ಬೇಕೋ ಏನೋ ತಿಳಿಯದು ಎಂದು ನಿಡುಮಾಮಿಡಿ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಈ ಸಮಾವೇಶದಲ್ಲಿ ಪಂಚಮಸಾಲಿ ಪೀಠ, ಕಾಗಿನೆಲೆ ಕನಕ ಪೀಠ ಮತ್ತು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳು ಭಾಗವಹಿಸಿದ್ದರು.












Click it and Unblock the Notifications