ನಿಡುಮಾಮಿಡಿ ಶ್ರೀಗಳಿಗೆ ಪೇಜಾವರರ ಪಂಥಾಹ್ವಾನ

ದಲಿತ ಮತ್ತು ಕೊಳಚೆ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪೇಜಾವರ ಶ್ರೀಗಳು, ನಿಡುಮಾಮಿಡಿ ಶ್ರೀಗಳಿಗೆ ಟೀಕೆ ಮಾಡುವುದೊಂದೇ ಕಸುಬು ಮತ್ತು ಅದನ್ನೇ ರೂಢಿಸಿಕೊಂಡಿದ್ದಾರೆ. ಕುಕ್ಕೇ ಮತ್ತು ಉಡುಪಿಯಲ್ಲಿ ನಡೆಯುವ ಮಡೆಸ್ನಾನ ನಿಲ್ಲಿಸಲು ನನ್ನ ವಿರೋಧವೇನೂ ಇಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ ಎಂದು ಕಿಡಿಕಾರಿದ್ದಾರೆ.
ಮಡೆಸ್ನಾನದ ವಿಚಾರದಲ್ಲಿ ನನ್ನ ನಿಲುವನ್ನು ಈಗಾಗಲೇ ಜನತೆಗೆ ತಿಳಿಸಿದ್ದೇನೆ, ಆದರೂ ಕೆಲವರು ನನ್ನ ಹೆಸರನ್ನು ವಿನಾಕಾರಣ ತರುತ್ತಿದ್ದಾರೆ. ಕುಕ್ಕೇ ಸುಬ್ರಮಣ್ಯ ಕ್ಷೇತ್ರ ನನ್ನ ಮಠದ ವ್ಯಾಪ್ತಿಯಲ್ಲಿಲ್ಲ ಎನ್ನುವುದು ಟೀಕೆ ಮಾಡುವವರಿಗೆ ತಿಳಿಯಲಿ. ಆ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಸರ್ಕಾರ ಒತ್ತಡಕ್ಕೆ ಮಣಿದು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಿ. ಇದಕ್ಕೆ ನನ್ನ ವಿರೋಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಡೆಸ್ನಾನವನ್ನು ವಿರೋಧಿಸುದಿಲ್ಲ, ಸಮರ್ಥಿಸಿ ಕೊಳ್ಳುವುದೂ ಇಲ್ಲ ಅದೊಂದು ಭಕ್ತರ ನಂಬಿಕೆ ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ಹಾಸ್ಯಾಸ್ಪದ. ಇದು ಪೇಜಾವರರ ದ್ವಂದ್ವ ನಿಲುವು ಹಾಗಾಗಿ ಅವರನ್ನು 'ಶ್ರೀ ದ್ವಂದ್ವಾಚಾರ್ಯ" ಎಂದು ಕರೆಯಬಹುದು ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಗಳು ಪೇಜಾವರ ಶ್ರೀಗಳನ್ನು ತೀವ್ರವಾಗಿ ಲೇವಡಿ ಮಾಡಿದ್ದರು.












Click it and Unblock the Notifications