ಬೆಟ್ಟದ ತಾಯಿ ನೋಡಲು ಹೋಗಿ ಕಾಮುಕರಿಗೆ ಬಲಿ

ತಾಪಿ ಜಿಲ್ಲೆಯಲ್ಲಿರುವ ಈ ಬೆಟ್ಟದ ಮೇಲೆ ಮಾತಾಜಿ ದೇಗುಲವಿದೆ. ದೇಗುಲಕ್ಕೆ ಭೇಟಿ ನೀಡಿದ ಗೀತಾ(ಹೆಸರು ಬದಲಿಸಲಾಗಿದೆ) ಹರಕೆ ತೀರಿಸಿಕೊಂಡು ಹಿಂತಿರುಗುವಾಗ ಕಾಮುಕರೊಡನೆ ನಡೆದ ಮಾತಿನ ಜಟಾಪಟಿ ಕೊನೆಗೆ ಸಾಮೂಹಿಕ ಅತ್ಯಾಚಾರದಲ್ಲಿ ಕೊನೆಾಗಿದೆ.
ಸೊಂಗಧ್ ನಲ್ಲಿರುವ ತನ್ನ ಆಂಟಿ ಹಾಗೂ ಗೆಳೆಯ ಶೈಲೇಶ್ ಜೊತೆಗೂಡಿ ಗೀತಾ ದೇಗುಲಕ್ಕೆ ತೆರಳುತ್ತಾಳೆ. ದೇಗುಲದಿಂದ ಹಿಂತಿರುಗುವಾಗ ಗುಂಪೊಂದು ಗೀತಾ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೀಟಲೆ ಮಾಡುತ್ತದೆ.
ಮಾತಿನ ಕಾಳಗ ಕೈಕೈ ಮಿಲಾಯಿಸುವ ಹಂತ ತಲುಪುತ್ತದೆ. ಆಗ ಗೀತಾಳನ್ನು ಪಕ್ಕದ ಪೊದೆಗೆ ದುಷ್ಕರ್ಮಿಗಳು ಎಳೆದೊಯ್ಯುತ್ತಾರೆ. ಶೈಲೇಶ್ ಹಾಗೂ ಆಂಟಿಗೆ ಸರಿಯಾಗಿ ಬಾರಿಸಿ ನೆಲಕ್ಕೆ ಕೆಡವಲಾಗುತ್ತದೆ.
ಅಸಹಾಯಕಳ ಮೇಲೆ ಬಿದ್ದ ಕಾಮಮೃಗಗಳು : ಪೊದೆಯಲ್ಲಿ ಗೀತಾ ಮೇಲೆ ಒಬ್ಬರ ನಂತರ ಒಬ್ಬರು ಅತ್ಯಾಚಾರ ಎಸೆಗುತ್ತಾರೆ. ಆಕೆ ನೋವಿನಿಂದ ಚೀರದಂತೆ ಬಾಯಿಗೆ ಬಟ್ಟೆ ತುರುಕಲಾಗಿರುತ್ತದೆ.ಕಾಮತೃಪ್ತಿ ಹೊಂದಿದ ಮೇಲೆ ಅಲ್ಲಿಂದ ಆರು ಜನರ ಗುಂಪು ಪರಾರಿಯಾಗುತ್ತದೆ.
ಇಷ್ಟರಲ್ಲಿ ಪ್ರಜ್ಞೆ ತಪ್ಪಿದ್ದ ಶೈಲೇಶ್ ಚೇತರಿಸಿಕೊಂಡು ಗೀತಾ ಇರುವೆಡೆಗೆ ಬರುತ್ತಾನೆ. ಕ್ಷಣ ಕಾಲ ಗೀತಾಳ ಪರಿಸ್ಥಿತಿ ಕಂಡು ದಂಗಾದರೂ, ಚೇತರಿಸಿಕೊಂಡು ತನ್ನ ಸ್ನೇಹಿತರಿಗೆ ಕರೆ ಮಾಡಿ ಸಹಾಯ ಬೇಡುತ್ತಾನೆ.
ಆಂಟಿ ಜೊತೆ ಕೆಲವರು ಗೀತಾಳನ್ನು ಸಮೀಪದ ಆಸ್ಪತ್ರೆಗೆ ಸೇರಿಸುತ್ತಾರೆ. ಇದೇ ಸಮಯಕ್ಕೆ ಶೈಲೇಶ್ ಹಾಗೂ ಆತನ ಗೆಳೆಯರು ದುಷ್ಕರ್ಮಿಗಳನ್ನು ಚೇಸ್ ಮಾಡುತ್ತಾರೆ.
ರಮೇಶ್ ಎಂಬ 46 ವರ್ಷದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಉಳಿದ ಐವರು ತಪ್ಪಿಸಿಕೊಳ್ಳುತ್ತಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ಕು ತಂಡ ರಚಿಸಿ ಆರೋಪಿಗಳ ಹುಡುಕಾಟ ನಡೆಸಿದೆ ಎಂದು ಠಾಣಾಧಿಕಾರಿ ಕೆವಿ ರಾಜ್ ವೀರ್ ಹೇಳಿದ್ದಾರೆ.












Click it and Unblock the Notifications