ಈಶ್ವರಪ್ಪ ಯಾಕೆ ಹೀಗಾಡ್ತಾರೆ : ಶ್ರೀರಾಮುಲು ಪ್ರಶ್ನೆ
ಬಳ್ಳಾರಿ,
ಡಿ. 17 : ಪಕ್ಷ ತೊರೆದಿರುವ ಶ್ರೀರಾಮುಲು ಮತ್ತೆ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ತಿರುಗೇಟು ನೀಡಿರುವ ಮಾಜಿ ಆರೋಗ್ಯ ಸಚಿವ, ಹೊಸ ಪಕ್ಷ ಕಟ್ಟುವುದು ಶತಸಿದ್ಧ, ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಉತ್ತರ ನೀಡಿದ್ದಾರೆ. id="toptextpromo">ಬಿಜೆಪಿ
ಸೇರಲು ಯಾವುದೇ ಯತ್ನವನ್ನೂ ನಾನು ನಡೆಸಿಲ್ಲ. ಕೆಎಸ್ ಈಶ್ವರಪ್ಪ ಯಾಕೆ ಹೀಗೆಲ್ಲ ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ ಎಂದು ಶ್ರೀರಾಮುಲು ಪ್ರಶ್ನಿಸಿದರು. ಶೂನ್ಯ ಮಾಸ ಮುಗಿದ ನಂತರ ಪಕ್ಷ ಕಟ್ಟಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದರು. ನಗರದಲ್ಲಿ ಶನಿವಾರ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಇದೇ
ಸಂದರ್ಭದಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ಶ್ರೀರಾಮುಲು ಶಿಲಾನ್ಯಾಸ ಮಾಡಿದರು. ಕೊಪ್ಪಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರ 79ನೇ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಯತ್ನಿಸಿದೆ ಎಂದ ಶ್ರೀರಾಮುಲು, 80ನೇ ಸಮ್ಮೇಳನವನ್ನು ಖಂಡಿತ ಬಳ್ಳಾರಿಯಲ್ಲೇ ನಡೆಸುವುದಾಗಿ ಜನರಿಗೆ ವಾಗ್ದಾನ ನೀಡಿದರು.











Click it and Unblock the Notifications