ಅಣ್ಣಾವ್ರ ನಾಡಿಗೆ ಬಂದ ಅಣ್ಣಾ ಹಜಾರೆ

ಬೆಂಗಳೂರು, ಡಿ. 17 : ಭ್ರಷ್ಟಾಚಾರದ ವಿರುದ್ಧ ನಾಗರಿಕರನ್ನು ಬಡಿದೆಬ್ಬಿಸಲು ಮತ್ತು ಲೋಕಾಯುಕ್ತ ಸಂಸ್ಥೆಯನ್ನು ಉಳಿಸುವ ಪಣತೊಟ್ಟಿರುವ ಭ್ರಷ್ಟವಿರೋಧಿ ಚಳವಳಿಯ ಹರಿಕಾರ ಅಣ್ಣಾ ಹಜಾರೆ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಫ್ರೀಡಂ ಪಾರ್ಕಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, 2.30ರ ಸುಮಾರಿಗೆ ಅಣ್ಣಾ ಹಜಾರೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೆಂಗಳೂರಿಗೆ ಅಣ್ಣಾ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಮೇ 28ರಂದು ಬಸವನಗುಡಿಯ ಮೈದಾನದಲ್ಲಿ ಅಣ್ಣಾ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಾಷಣ ಮಾಡಿದ್ದರು.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಸುದ್ದಿಗಾರನ್ನುದ್ದೇಶಿಸಿ ಸಂಕ್ಷಿಪ್ತವಾಗಿ ಮಾತನಾಡಿದ ಅಣ್ಣಾ, ಇದೇ ಅಧಿವೇಶನದಲ್ಲಿ ಜನ ಲೋಕಪಾಲ ಮಸೂದೆ ಅಂಗೀಕಾರ ಆಗಬೇಕು. ಜ.1ರೊಳಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದರು.

ಈ ಬಾರಿ ಲೋಕಪಾಲ ಮಸೂದೆ ಅಂಗೀಕರಿಸದಿದ್ದರೆ ದೇಶದಾದ್ಯಂತ ಜೈಲ್ ಭರೋ ಆಂದೋಲನಕ್ಕೆ ನಾಂದಿ ಹಾಡಲಾಗುವುದು. ದೇಶದ ಎಲ್ಲ ಜೈಲುಗಳೂ ಯವಕ ಯುವತಿಯರಿಂದ ತುಂಬಿ ತುಳುಕುವುದು. ಇದಕ್ಕೆ ಕೇಂದ್ರ ಸರಕಾರ ಅವಕಾಶ ನೀಡಬಾರದು ಎಂದು ಅಣ್ಣಾ ಎಚ್ಚರಿಸಿದರು.

ಅಣ್ಣಾ ಹಜಾರೆ ಅವರ ಜೊತೆ ಅಣ್ಣಾ ಟೀಂನಲ್ಲಿರುವ ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಮುಂತಾದವರಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ಸಭೆಯಲ್ಲಿ ಭಾಗವಹಿಸಿ ಜನರನ್ನುದ್ದೇಶಿ ಮಾತನಾಡಲಿದ್ದಾರೆ. ಮಹಾರಾಣಿ ಕಾಲೇಜು ಮುಂದಿರುವ ಫ್ರೀಡಂ ಪಾರ್ಕ್ ಈಗಾಗಲೆ ಜನರಿಂದ ತುಂಬಲು ಪ್ರಾರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+