ಕೊಯಮತ್ತೂರಿನಲ್ಲಿ ಎರಡು ದಿನ ಕನ್ನಡ ಹಬ್ಬ

ಕೊಯಮತ್ತೂರು, ಡಿ.16: ಕರ್ನಾಟಕ ಮತ್ತು ತಮಿಳುನಾಡು ಜನರ ನಡುವಿನ ಬಾಂಧವ್ಯ ವೃದ್ಧಿಗಾಗಿ ಕೊಯಮತ್ತೂರಿನಲ್ಲಿ ಡಿ.17ರಿಂದ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಆಯೋಜಿಸಿದೆ.

ಜಾನಪದ ಹಾಡು ಮತ್ತು ನೃತ್ಯ, ಯಕ್ಷಗಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದೆ.

ಕರ್ನಾಟಕ ಸರ್ಕಾರದ ಜತೆ ಸ್ನೇಹ ಕನ್ನಡ, ಕರ್ನಾಟಕ ಸಂಘಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಸಂಚಾಲಕ ಎ.ರಾಮದಾಸ್ ಹೇಳಿದ್ದಾರೆ.

ಮೈಸೂರು ದಸರಾ ಮೆರವಣಿಗೆ, ಕೊಡವ ನೃತ್ಯ, ಗೋರಕ ನೃತ್ಯ, ಪೂಜಾ ಕುಣಿತ, ಮಹಿಳೆಯರ ಡೊಳ್ಳು ಕಣಿತ, ಕನ್ನಡದ ಹಳೆಯ ಹಾಡುಗಳು ಹಾಗೂ ಕಾಸರಗೋಡು ತಂಡದವರು ನಡೆಸಿಕೊಡಲಿರುವ ಯಕ್ಷಗಾನ ಹಾಗೂ ತಾಳಮದ್ದಲೆ ಕಾರ್ಯಕ್ರಮಗಳು ರಂಜಿಸಲಿದೆ.

ಕರ್ನಾಟಕ ಸರ್ಕಾರದ ಪ್ರತಿನಿಧಿಗಳಾಗಿ ಸಚಿವ ಸುರೇಶ್‌ಕುಮಾರ್, ಗೋವಿಂದ ಕಾರಜೋಳ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕೊಯಮತ್ತೂರು ಕನ್ನಡ ಸಂಘದ ಅಧ್ಯಕ್ಷ ಸಂತೋಷ್ ರಾವ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+