ಕಿಂಗ್ ಫಿಷರ್ ಬ್ಯಾಂಕ್ ಖಾತೆ ಮುಟ್ಟುಗೋಲು ಇಲ್ಲ

ಈಗ ಕೇಂದ್ರ ತೆರಿಗೆ ಮತ್ತು ಸುಂಕ ಇಲಾಖೆ ಕೂಡಾ ಕಿಂಗ್ ಫಿಷರ್ ಹಾಗೂ ಏರ್ ಇಂಡಿಯಾ ಬ್ಯಾಂಕ್ ಖಾತೆ ಮುಟ್ಟು ಗೋಲು ಹಾಕಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಮಲ್ಯರಿಗೆ ಶುಭ ಸುದ್ದಿ ನೀಡಿದೆ.
ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಈ ಕಂಪೆನಿಗಳು ಸರ್ಕಾರಕ್ಕೆ ಮಧ್ಯಂತರ ಮೊತ್ತದ ಹಣ ಪಾವತಿಸಿರುವ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಲಾಗಿದೆ.
ತೆರಿಗೆ ಪಾವತಿಸಿದ ಕಿಂಗ್ : ನವೆಂಬರ್ ತಿಂಗಳ ತೆರಿಗೆ ಬಾಕಿ ಮೊತ್ತದಲ್ಲಿ ಕಿಂಗ್ ಫಿಷರ್ 9 ಕೋಟಿ ರು ಹಾಗೂ ಏರ್ ಇಂಡಿಯಾ 8 ಕೋಟಿ ರು ಪಾವತಿಸಿದೆ. ಏರ್ ಇಂಡಿಯಾ ಸಂಸ್ಥೆ ಸಿಬಿಇಸಿಗೆ 310 ಕೋಟಿ ರು ತೆರಿಗೆ ಹಣ ಬಾಕಿ ನೀಡಬೇಕಿದೆ. ಕಿಂಗ್ ಫಿಷರ್ ಸಂಸ್ಥೆ 110 ಕೋಟಿ ರು ಪಾವತಿಸಬೇಕಿದೆ.
ತೆರಿಗೆ ಬಾಕಿ ಉಳಿದಿದ್ದ ಕಾರಣದಿಂದ ಕಳೆದ ವಾರ ಏರ್ ಇಂಡಿಯಾದ 11 ಬ್ಯಾಂಕ್ ಖಾತೆ ಹಾಗೂ ಕಿಂಗ್ ಫಿಷರ್ ನ 10 ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಇಸಿ ನಿರ್ಧರಿಸಿತ್ತು. ಆದರೆ, ಶುಕ್ರವಾರ ಸಿಬಿಇಸಿ ಮುಖ್ಯಸ್ಥ ಎಸ್ ಕೆ ಗೋಯಲ್ ಜೊತೆ ಕಿಂಗ್ ಫಿಷರ್ ಮಾಲೀಕ ಮಲ್ಯ ನಡೆಸಿದ ಮಾತುಕತೆ ಫಲಪ್ರದವಾಗಿದೆ.
ಸುಮಾರು 6,419 ಕೋಟಿ ಸಾಲದ ಹೊರೆ ಹೊತ್ತಿರುವ ಕಿಂಗ್ ಫಿಷರ್ ಸಂಸ್ಥೆಗೆ ಶುಭಕಾಲ ಆರಂಭವಾಗಿದ್ದು, ಮತ್ತೆ ವಿಮಾನಯಾನ ಸುಗಮವಾಗುವ ಲಕ್ಷಣಗಳಿವೆ.












Click it and Unblock the Notifications