ನನಗೆ ಯಾವ ಕುರ್ಚಿಯ ಆಸೆಯೂ ಇಲ್ಲ: ಬಿಎಸ್ ವೈ

ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಲಿದ್ದು, ಹತ್ತು ಶಾಸಕರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸೇರಲಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಕಡೆಯಿಂದ ಸುದ್ದಿ ಬಂದಿತ್ತು. ಇದಕ್ಕೆ ಪೂರಕವಾಗಿ ರಾಜ್ಯದ ಎನ್ ಸಿಪಿ ಅಧ್ಯಕ್ಷರಾಗಲು ಯಡಿಯೂರಪ್ಪ ಅವರಿಗೆ ಆಫರ್ ಬಂದಿದೆ ಎಂಬ ಸುದ್ದಿಯೂ ಹರಡಿತ್ತು.
ಆದರೆ, ಯಡಿಯೂರಪ್ಪ ಇದು ಊಹಾಪೋಹ ಸುದ್ದಿ ಎಂದು ತಳ್ಳಿಹಾಕಿದ್ದಾರೆ. ಇದರ ಜೊತೆಗೆ ನಿತಿನ್ ಗಡ್ಕರಿ ಹಾಗೂ ಹೈಕಮಾಂಡ್ ಜೊತೆ ದೆಹಲಿಯಲ್ಲಿ ನಡೆದ ಮಾತುಕತೆಗೆ ವಿಶೇಷ ಕಲ್ಪಿಸಿ ಮಾಧ್ಯಮಗಳು ವರದಿ ಮಾಡುತ್ತಿದೆ.
ನೋ ಡಿಮ್ಯಾಂಡ್ : ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವಾಗಲಿ, ಮುಖ್ಯಮಂತ್ರಿ ಸ್ಥಾನವಾಗಲಿ ನನಗೆ ಬೇಡ. ಯಾವ ಕುರ್ಚಿ ಆಸೆಯೂ ನನಗಿಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅವರು ಅಚ್ಚರಿ ಮೂಡಿಸಿದ್ದಾರೆ.
ಡಿ.22ರಂದು ನಡೆಯಲಿರುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ಡಿವಿ ಸದಾನಂದ ಗೌಡರು ನಿಚ್ಚಳ ಬಹುಮತದೊಂದಿಗೆ ಜಯ ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ಅವರು ವ್ಯಕ್ತಪಡಿಸಿದರು.












Click it and Unblock the Notifications