ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡೆಸ್ನಾನ ನಿಷೇಧಿಸುವ ಮಾತೇ ಇಲ್ಲ: ರಾಜ್ಯ ಸರಕಾರ

By Srinath
|
Google Oneindia Kannada News

karnataka-govt-not-to-ban-made-snana-vs-acharya
ಬೆಂಗಳೂರು, ಡಿ.7: ಮಡೆಸ್ನಾನ ಪದ್ಧತಿಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಬದಲಿಗೆ ಹಂತಹಂತವಾಗಿ ಈ ಪದ್ಧತಿಯನ್ನು ಕೊನೆಗಾಣಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್ ನಲ್ಲಿ ಸೋಮವಾರ ಸ್ಪಷ್ಟಪಡಿಸಿದೆ.

'ಧಾರ್ಮಿಕ ನಂಬಿಕೆಗಳು ಸೂಕ್ಷ್ಮ ವಿಷಯಗಳಾಗಿದ್ದು, ಅವುಗಳ ಮೇಲೆ ಬಲವಂತವಾಗಿ ನಿರ್ಬಂಧ ಹೇರುವುದು ತರವಲ್ಲ. ಆದ್ದರಿಂದ, ಮಡೆಸ್ನಾನವನ್ನು ನಿಷೇಧಿಸುವ ನಿಟ್ಟಿನಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಆಚರಿಸುತ್ತಿರುವ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವ ಕುರಿತು ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕಿ ಮೋಟಮ್ಮ ಅವರು ಸೋಮವಾರ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಹೀಗೆ ಉತ್ತರಿಸಿದರು.

'ದೊಡ್ಡ ಜನಸಮೂಹವು ಮಡೆಸ್ನಾನವನ್ನು ನಂಬುತ್ತಿದೆ. ಜತಗೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದನ್ನು ಸಂವಿಧಾನದಲ್ಲೇ ನಿಷೇಧಿಸಲಾಗಿದೆ. ಆದ್ದರಿಂದ, ಏಕಾಏಕಿ ಈ ಪದ್ಧತಿಯನ್ನು ನಿಷೇಧಿಸುವ ಬದಲು ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು, ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ನಡೆಸಿ, ಸಾಮಾಜಿಕ ಪಿಡುಗುಗಳನ್ನು ನಿವಾರಿಸಬೇಕಾಗಿದೆ' ಎಂದು ಆಚಾರ್ಯ ಸೂಚ್ಯವಾಗಿ ತಿಳಿಸಿದರು.

ಈ ಪದ್ಧತಿ ಬಗ್ಗೆ ಇನ್ನು ನಾಲ್ಕೇ ದಿನಗಳಲ್ಲಿ ಸಮಗ್ರ ವರದಿ ತರಿಸಿಕೊಂಡು ನಿಷೇಧ ಹೇರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಮೊನ್ನೆಯಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Mujrai minister and Udupi district incharge minister VS Acharya has said that government is not in a hurry to ban the made snana ritual during Champa Shashti, where devotees roll over the left over meals of Brahmins in the famous Kukke Subramanya Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X