ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು ಸಿಎಂ ಬಳಿ ಆಡಿದ ಪಿಸು ಮಾತೇನು..

|
Google Oneindia Kannada News

Ramulu & DVS
ಬೆಂಗಳೂರು, ಡಿ 13: ಬಳ್ಳಾರಿ ಚುನಾವಣೆಯಲ್ಲಿ ಗೆದ್ದು ಬಂದ ಸ್ವಾಭಿಮಾನಿ ವೀರ ಶ್ರೀರಾಮುಲು ಅಸೆಂಬ್ಲಿಯಲ್ಲಿ ಸೋಮವಾರ (ಡಿ 12) ಇದ್ದಕ್ಕಿದ್ದಂತೆ ಎದ್ದು ಬಂದು ಮುಖ್ಯಮಂತ್ರಿ ಸದಾನಂದ ಗೌಡ ಅವರ ಬಳಿ ಬಂದು ಪಿಸುಪಿಸು ಮಾತನಾಡಿದ್ದು ಹಲವು ಊಹಾಪೋಹಗಳಿಗೆ ಆಹಾರವಾಗಿದೆ.

ಸಿಎಂ ಸೀಟ್ ಬಳಿ ಬಂದ ಪಕ್ಷೇತರ ಶಾಸಕ ಶ್ರೀರಾಮುಲು ಸ್ವಲ್ಪ ಹೊತ್ತು ಮೆಲುದನಿಯಲ್ಲಿ, ಗಂಭೀರವಾಗಿ ಮಾತನಾಡಿ ನಂತರ ಸದಾನಂದ ಗೌಡರ ಕೈಕುಲುಕಿ ಹೋಗಿದ್ದು ಸದನದ ಎಲ್ಲಾ ಸದಸ್ಯರನ್ನು ಆಡಳಿತ ಪಕ್ಷದ ಸದಸ್ಯರನ್ನೂ ಸಹಿತ ಒಂದು ಕ್ಷಣ ದಂಗಾಗಿಸಿದೆ.

ಸದನದಲ್ಲಿ ಎಲ್ಲಾ ಸದಸ್ಯರ ಪ್ರತಿಕ್ರಿಯೆ ನೋಡಿದ ಡಿ ಕೆ ಶಿವಕುಮಾರ್ 'ಏನ್ ಸ್ವಾಮಿ ಅದು ಕುಸುಕುಸು, ನೀವು ಚೆನ್ನಾಗಿರಿ, ನಾವೇನೂ ಕಿತ್ತಾಡ್ಕೊಳ್ಳಿ ಅಂತ ಹೇಳಿದ್ವಾ? ನೀವು ನೀವೇ ಕಿತ್ತಾಡಿ ಈಗ ಒಂದಾದ ಹಾಗೆ ಕಾಣಿಸುತ್ತೆ, ನಡೀಲಿ..ನಡೀಲಿ' ಎಂದು ಛೇಡಿಸಿದರು.

ಇದಕ್ಕೆ ಇನ್ನೂ ಸ್ವಲ್ಪ ಒಗ್ಗರಣೆ ಹಾಕಿದ ವಿಪಕ್ಷದ ನಾಯಕ ಸಿದ್ದರಾಮಯ್ಯ, " ಸ್ವಾಮಿ ಮುಖ್ಯಮಂತ್ರಿ ಮಹೋದಯರೇ. ನೀವು ಚೆನ್ನಾಗಿದ್ರೆ ನಮ್ಮದೇನೂ ಅಭ್ಯಂತರವಿಲ್ಲ. ಹೀಗೆ ಇರಿ, ಚೆನ್ನಾಗಿರಿ' ಎಂದು ಹಾಸ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನೋಡಿ ನನಗೆ ಸದನದ ಎಲ್ಲಾ 224 ಶಾಸಕರ ಪ್ರೀತಿ ಬೇಕು. ನಾನು ಯಾರ ವಿರುದ್ದವೂ ಹೊಟ್ಟೆ ಕಿಚ್ಚು ಪಡುವುದಿಲ್ಲ. ನೀವು ಇಲ್ಲಿ ಬಂದು ಕುಳಿತರೆ ಬಹಳ ಪ್ರೀತಿ ಮಾಡುತ್ತೇನೆ. ಚಿಂತೆ ಯಾಕೆ ಮಾಡುತ್ತೀರಾ ಎಂದಾಗ ಸದನದಲ್ಲಿ ನಗೆಯೋ ನಗೆ.

English summary
The newly elected Bellary rural MLA B Sriramulu was confidentially discussing with CM Sadananda Gowda in the Assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X