I Want to Become CM: ಸಿದ್ದರಾಮಯ್ಯ ಕೂಗಾಟ

Siddaramaiah
ಬೆಂಗಳೂರು, ಡಿ.9: ಚಳಿಗಾಲದ ಅಧಿವೇಶನದ ಆರಂಭದಿಂದಲೂ ಬಿಜೆಪಿ ರಾಜ್ಯಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ಮೇಲೆ ಮುಗಿ ಬಿದ್ದಿರುವ ಪ್ರತಿಪಕ್ಷಗಳು, ಶುಕ್ರವಾರ ಕೂಡಾ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

ರಾಜ್ಯಪಾಲರು ಹಾಗೂ ಲೋಕಾಯುಕ್ತರ ವಿಚಾರದಲ್ಲಿ ಹಗುರವಾಗಿ ಮಾತನಾಡುತ್ತಿರುವ ಈಶ್ವರಪ್ಪ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಈ ಸಮಯದಲ್ಲಿ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ಆರಂಭವಾಯಿತು. 'ನಿಮ್ಮ ಸೀಟು ಭದ್ರ ಮಾಡ್ಕೊಳ್ರಿ ಈಶ್ವರಪ್ಪ, ಯಡಿಯೂರಪ್ಪ ಅವರ ಕಣ್ಣು ಬಿದ್ದಿದೆ ಅದರ ಮೇಲೆ, ಸಿಎಂ ಸೀಟು ಬಿಡಲ್ಲ ಎಂದು ಸದಾನಂದ ಗೌಡರು ಹೇಳಿದ್ದಾರೆ' ಎಂದು ಸಿದ್ದರಾಮಯ್ಯ ಕಿಚಾಯಿಸಿದರು.

ಇದಕ್ಕೆ ಉತ್ತರಿಸಿದ ಈಶ್ವರಪ್ಪ ಸಿಎಂ ಹುದ್ದೆ ಆಸೆ ಪಟ್ಟರೆ ತಪ್ಪೇನಿಲ್ಲ. ನಿಮಗೆ ಸಿಎಂ ಆಗೋಕೆ ಆಗಿಲ್ಲ ಬಿಡಿ ಎಂದರು.

ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಯಾಕ್ರಿ ಯಡಿಯೂರಪ್ಪ ಮಾತ್ರ ಸಿಎಂ ಆಗ್ಬೇಕು. I want to become CM, I Want to become CM ಎಂದು ಮತ್ತೆ ಮತ್ತೆ ಇಂಗ್ಲೀಷಿನಲ್ಲಿ ಸಾರಿ ಹೇಳಿದ ಸಿದ್ದರಾಮಯ್ಯ ಸುತ್ತಲೂ ನೋಡಿದರು. ಉತ್ತರ ಸಿಕ್ಕ ಈಶ್ವರಪ್ಪ ಅವರಂತೆ ಎಲ್ಲರೂ ಪೆಚ್ಚುಮೋರೆ ಹಾಕಿಕೊಂಡಿದ್ದರೆ ಹೊರತು ಸಿದ್ದು ಅವರಿಗೆ ಯಾರೂ ಜೈಕಾರ ಹಾಕಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+