ಎಸ್ಸೆಂ ಕೃಷ್ಣ ರಾಜೀನಾಮೆಗೆ ಟೀಂ ಅಣ್ಣಾ ಆಗ್ರಹ
ನವದೆಹಲಿ,
ಡಿ.9: ಅಕ್ರಮ ಗಣಿ ಹಗರಣ ಆರೋಪದ ಹಿನ್ನೆಲೆಯಲ್ಲಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ವಿರುದ್ಧ ಕರ್ನಾಟಕದ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿದೆ.ಕೃಷ್ಣ ಅವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಟೀಂ ಅಣ್ಣಾ ಆಗ್ರಹಿಸಿದೆ. id="toptextpromo">ಲೋಕಾಯುಕ್ತ
ಪೊಲೀಸರು ಸುಮ್ಮನೆ ಯಾವುದೇ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲು ಮಾಡುವುದಿಲ್ಲ. ಪೂರ್ವ ತಯಾರಿ ನಡೆಸಿಯೇ ದಾಖಲಿಸಿರುತ್ತಾರೆ. ಇದರಲ್ಲಿ ರಾಜಕೀಯ ದ್ವೇಷ ಇದೆ ಎಂದು ಹೇಳುವುದು ಮೂರ್ಖತನ. ಕೃಷ್ಣ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾನ ಉಳಿಸಿಕೊಳ್ಳಲಿ ಎಂದು ಕಿರಣ್ ಬೇಡಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕರ್ನಾಟಕದ
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎನ್.ಧರಂಸಿಂಗ್ ಹಾಗೂಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿ ಹಗರಣದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications