ಕುಕ್ಕೆ ಮಡೆಸ್ನಾನ ನಿಷೇಧಕ್ಕೆ ದಸಂಸ ಆಗ್ರಹ
ಮಂಗಳೂರು,
ಡಿ. 9 : ಮಡೆಸ್ನಾನ ನಿಷೇಧಿಸಿದರೆ ನನ್ನ ಅಭ್ಯಂತರವೇನೂ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿರುವ ಬೆನ್ನಲ್ಲೇ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡುವ ಈ ಆಚರಣೆಯನ್ನು ನಿಷೇಧಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಗ್ರಹಿಸಿದೆ. id="toptextpromo">ದಲಿತ
ಸಂಘರ್ಷ ಸಮಿತಿಯ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಿ ಮಡೆಸ್ನಾನ ವಿರೋಧಿಸಿದ ದಲಿತರ ಮೇಲೆ ಹಲ್ಲೆ ನಡೆಸಲು ಪ್ರಚೋದಿಸಿದ ಅಧಿಕಾರಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮನವಿಪತ್ರ ಕೊಟ್ಟರು. id='are-slot-1' class='oiad oi-axt oiadv'> id='top-searched-articles'>ಚಂಪಾಷಷ್ಠಿಯಂದು
ಮಡೆಸ್ನಾನವನ್ನು ವಿರೋಧಿಸಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ಸಮಿತಿಯ ಅಧ್ಯಕ್ಷ ಕೆಎಸ್ ಶಿವರಾಮು ಅವರನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ದೇವಸ್ಥಾನದ ಆಡಳಿತಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸಮಿತಿ ಸಂಚಾಲಕ ಚಂದ್ರು ಎಲ್ ಅವರು ಆಗ್ರಹಿಸಿದರು.











Click it and Unblock the Notifications