ಬಿಜೆಪಿ ಮೇಲೆ ಯಡಿಯೂರಪ್ಪ ನಾಡಬಾಂಬ್

ಸಿಎಂ ಸದಾನಂದ ಗೌಡ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಟೀ ಕುಡಿಸಿದ ಯಡಿಯೂರಪ್ಪ, ಒಂದು ವೇಳೆ ನನ್ನನ್ನು ಸಿಎಂ ಮಾಡಿಲ್ಲಾಂದ್ರೆ ನಾನು ಪಕ್ಷ ತೊರೆದು ಶರದ್ ಪವಾರ್ ಅವರ ಎನ್ಸಿಪಿ ಪಕ್ಷ ಸೇರುವುದು ಖಚಿತ ಎಂದಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿಯವರನ್ನು ನಾನು ನಿಭಾಯಿಸುತ್ತೇನೆ, ಆಡ್ವಾಣಿಯವರನ್ನು ನೀವು ನಿಭಾಯಿಸಿ ಎಂದು ಧಮಕಿ ಹಾಕಿದ್ದಾರೆಂದು ಮಲ್ಲೇಶ್ವರಂ ಬಿಜೆಪಿ ಮೂಲಗಳಿಂದ ವರದಿಯಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸಲು ರಾಮುಲು ಮತ್ತು ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ. ನನ್ನನ್ನು ಸಿಎಂ ಮಾಡಿದರೆ ಆಪರೇಶನ್ ಕಮಲ ನಡೆಸಿ ಸರಕಾರವನ್ನು ಉಳಿಸಿಕೊಳ್ಳುತ್ತೇನೆ. ಅದರ ಕಲೆ ನನಗೆ ಗೊತ್ತಿದೆ. ಇಲ್ಲದಿದ್ದರೆ ನನ್ನ ದಾರಿ ನನಗೆ ನಿಮ್ಮ ದಾರಿ ನಿಮಗೆ ಎಂದು ಯಡ್ಡಿ ಹೊಸ ವರಸೆ ತೆಗೆದಿದ್ದಾರೆನ್ನಲಾಗಿದೆ.
ರಾಜ್ಯಾದ್ಯಕ್ಷ ಸ್ಥಾನ ಬಯಸಿದ್ದ ಯಡಿಯೂರಪ್ಪ ಅವರಿಗೆ ಆ ಸ್ಥಾನ ಸಿಗುವುದು ಮರೀಚಿಕೆ ಅನಿಸಿದ ತಕ್ಷಣ ಯಡ್ಡಿ ಈ ಹೊಸ ವರಸೆ ತೆಗೆದಿದ್ದಾರೆ. ಯಡಿಯೂರಪ್ಪ ಅವರ ದಿಢೀರ್ ಈ ನಿರ್ಧಾರದಿಂದ ಸಿಎಂ ಸಹಿತ ಎಲ್ಲಾ ಹಿರಿಯ ನಾಯಕರಿಗೆ ಏನು ಹೇಳಬೇಕು ತಿಳಿಯದಾಗಿ ಕಕ್ಕಾಬಿಕ್ಕಿಯಾದರೆಂದು ವರದಿಯಾಗಿದೆ.












Click it and Unblock the Notifications