ಮಡೆಸ್ನಾನ ನಿಷೇಧಿಸಿದರೆ ಅಭ್ಯಂತರವಿಲ್ಲ : ಪೇಜಾವರಶ್ರೀ

ಪೇಜಾವರ ಶ್ರೀಗಳು ವಿದ್ಯಾನಗರದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಮಂಡಳ ಹಾಸ್ಟೆಲ್ ಉದ್ಘಾಟಿಸಲು ಬುಧವಾರ ಇಲ್ಲಿಗೆ ಬಂದಾಗ ಈ ನುಡಿಗಳನ್ನು ಹೇಳಿದ್ದಾರೆ. ಆದರೆ, ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.
ಈ ಆಚರಣೆಯನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕಳೆದ ನಾಲ್ಕು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಆಚರಿಸುತ್ತಿರುವವರ ಭಾವನೆಗಳೊಂದಿಗೆ ತಳಕು ಹಾಕಿಕೊಂಡಿದೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಚಿಂತನೆ ನಡೆಸಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪೇಜಾವರ ಶ್ರೀಗಳು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡಲಿ ಎಂದು ಕಾಂಗ್ರೆಸ್ ಸಂಸದ ಎಚ್ ವಿಶ್ವನಾಥ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.












Click it and Unblock the Notifications