ಸಿಬಿಐ ಆಯ್ತು ಮುಂದೆ ಇ.ಡಿ. ತನಿಖೆ: ರೆಡ್ಡಿ ಕಂಗಾಲು
ಹೈದರಾಬಾದ್,
ಡಿ.5: ಸದ್ಯಕ್ಕೆ ಶ್ರೀರಾಮುಲು ಗೆಲುವನ್ನು ಸವಿಯುವ ಮೂಡಿನಲ್ಲಿ ರೆಡ್ಡಿ ಇಲ್ಲ ಸಿಬಿಐನವರು ತಮ್ಮ ಮೇಲೆ ಮುರುಕೊಂಡು ಬಿದ್ದಿರುವುದನ್ನು ನೋಡಿ ರೆಡ್ಡಿ ಕಂಗಾಲಾಗಿದ್ದಾರೆ. ತಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬುದು ಈಗಾಗಲೇ ರೆಡ್ಡಿ ಅರಿವಿಗೆ ಬಂದಿದೆ. ಮನಿ ಲಾಂಡ್ರಿಂಗ್ ಸಂಬಂಧ ಪ್ರಕರಣ ದಾಖಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಳಿವು ನೀಡಿದೆ. ಇದರಿಂದ ರೆಡ್ಡಿ ಸದ್ಯಕ್ಕೆ ಜೈಲಿನಿಂದ ಹೊರಬರುವುದು ದುಸ್ತರವೇ ಸರಿ. id="toptextpromo">ಶನಿವಾರದ
ಸಿಬಿಐ ಆರೋಪಪಟ್ಟಿ ದಾಖಲಿಸುತ್ತಿದ್ದಂತೆ ಮುಂದಿನ ಕ್ರಮವಾಗಿ, ಕೇಂದ್ರ ಹಣಕಾಸು ಸಚಿವಾಲಯವು ಪ್ರಿವೆನ್ಶನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ ಅನುಸಾರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಸುಚನೆ ನೀಡಿದೆ. ನೇರವಾಗಿ ಸಚಿವಾಲಯದ ಉನ್ನತಾಧಿಕಾರಿ ವರ್ಗವೇ ಪ್ರಕರಣವನ್ನು ಪರಿಶೀಲಿಸುತ್ತಿದೆ. id='are-slot-1' class='oiad oi-axt oiadv'> id='top-searched-articles'>ಒಮ್ಮೆ
ಇ.ಡಿ. ಪ್ರಕರಣವನ್ನು ದಾಖಲಿಸಿಕೊಂಡ ಬಳಿಕ ರೆಡ್ಡಿ ದೀರ್ಘಕಾಲ ಜೈಲಿನಲ್ಲಿ ಉಳಿಯುವುದು ಖಚಿತವಾಗಲಿದೆ. ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮಾದರಿಯಲ್ಲಿ (2 ವರ್ಷದಿಂದ) ದೀರ್ಘ ಕಾಲ ಜೈಲಿನಲ್ಲಿ ಉಳಿಯುವುದು ರೆಡ್ಡಿಗೆ ಅನಿವಾರ್ಯವಾಗಲಿದೆ. ಇ.ಡಿ. ಯಾರದೇ ವಿರುದ್ಧ ಪ್ರಕರಣ ದಾಖಲಿಸಿಕೊಂಡರೆ ಕೋರ್ಟುಗಳು ಅವರಿಗೆ ಅಷ್ಟು ಸುಲಭಕ್ಕೆ ಜಾಮೀನು ನೀಡುವುದಿಲ್ಲ.











Click it and Unblock the Notifications