ರೆಡ್ಡಿ ಅಕ್ರಮ: ಪಟ್ಟು ಬಿಗಿಗೊಳಿಸಿದ ಸಿಬಿಐ
ಹೈದರಾಬಾದ್,
ಡಿ.5: ತಮ್ಮ ರಾಜಕೀಯ ಬಂಟ ಶ್ರೀರಾಮುಲು ಚುನಾವಣೆಯಲ್ಲಿ ಜಯ ಸಾಧಿಸುತ್ತಿದ್ದಂತೆ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ನಿಟ್ಟುಸಿರು ಬಿಟ್ಟು ಸಮಾಧಾನಪಟ್ಟಿದ್ದಾರಾ? ಸಿಬಿಐ ತಮ್ಮ ವಿರುದ್ಧ ಶನಿವಾರ ಆರೋಪಪಟ್ಟಿ ದಾಖಲಿಸಿರುವುದರಿಂದ ರೆಡ್ಡಿ ಜೈಲಿನಿಂದ ಹೊರಬರುತ್ತಾರಾ? ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಪಾರಾಗುತ್ತಾರಾ? id="toptextpromo">ನೋ
ಛಾನ್ಸ್. ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅಂದರೆ ರೆಡ್ಡಿಗೆ ಸದ್ಯಕ್ಕೆ ಜೈಲುವಾಸದಿಂದ ಮುಕ್ತಿಯಿಲ್ಲ. ಏಕೆಂದರೆ ಸಿಬಿಐನವರು ರೆಡ್ಡಿ ವಿರುದ್ಧ ಕುಣಿಕೆಯನ್ನು ಇನ್ನೂ ಹೆಚ್ಚು ಬಿಗಿಗೊಳಿಸುತ್ತಿದ್ದಾರೆ. 'ತಾವು ಆರೋಪಪಟ್ಟಿ ದಾಖಲಿಸಿದ್ದಾಯ್ತು. ಇನ್ನು ನೀವು ರಂಗಕ್ಕೆ ಇಳಿಯಿರಿ' ಎಂದು ಇತರೆ ತನಿಖಾ ಸಂಸ್ಥೆಗಳಿಗೆ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಲು ಆಹ್ವಾನ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾವು
ಸ್ವಾಧೀನ ಪಡಿಸಿಕೊಂಡಿರುವ ದಾಖಲೆಗಳನ್ನು ಒಂದೊಂದಾಗಿ ಇತರೆ ತನಿಖಾ ಸಂಸ್ಥೆಗಳಿಗೆ ನೀಡುತ್ತಿದೆ ಸಿಬಿಐ. ರೆಡ್ಡಿ ವಿರುದ್ಧ ನಾನಾ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸುವಂತೆ ಸಿಬಿಐ ಅಧಿಕಾರಿಗಳು ಸಂದೇಶ ನೀಡಿದ್ದಾರೆ.











Click it and Unblock the Notifications