ಈ ವಾರಾಂತ್ಯ ರೆಡ್ಡಿಗೆ ಕಾದಿದೆ ಮನಿ ಲಾಂಡ್ರಿಂಗ್ ಕಂಟಕ

ed-to-file-pmla-case-against-reddy
ಹೈದರಾಬಾದ್, ಡಿ.5: ಹಾಂಕಾಂಗಿನ ಮಕುವಾ ಮುಕ್ತ ವಲಯದಲ್ಲಿ ಜೆಎಲ್ಆರ್ ಟ್ರೇಡಿಂಗ್ ಕಂಪನಿ ಇದೆ. ಇದರಲ್ಲಿ ಜೆ ಅಂದರೆ ಜನಾರ್ದನ, ಎಲ್ ಅಂದರೆ ಅವರ ಪತ್ನಿ ಲಕ್ಷ್ಮಿ ಮತ್ತು ಆರ್ ಅಂದರೆ ರೆಡ್ಡಿ ಎಂದರ್ಥ. ರೆಡ್ಡಿ ಈ ಕಂಪನಿಯ ಮೂಲಕವೇ ಚೀನಾಗೆ ಅದಿರು ಸಾಗಣೆ ಮಾಡಿರುವುದು.

ಮೊದಲು ಜೆಎಲ್ಆರ್ ಟ್ರೇಡಿಂಗ್ ಕಂಪನಿ ಮೂಲಕ ಕಡಿಮೆ ದರದಲ್ಲಿ ಇನ್ವಾಯ್ಸ್ ಮಾಡಿ ಚೀನಾಗೆ ಕಳಿಸುವುದು. ಬಳಿಕ ಅಲ್ಲಿ ವಾಸ್ತವದ ದರಗಳಲ್ಲಿ ಅದಿರನ್ನು ಮಾರಾಟ ಮಾಡಿ, ಗರಿಷ್ಠ ಲಾಭ ಮಾಡಿಕೊಳ್ಳುವುದು ಈ ವ್ಯವಹಾರದ ಹಿಕ್ಮತ್ತಾಗಿತ್ತು. ಅಂದರೆ ಭಾರತದಲ್ಲಿ ನಷ್ಟ ಅನುಭವಿಸಿದಂತೆ ಲೆಕ್ಕ ತೋರಿಸುವುದು ಅಲ್ಲಿ ಚೀನಾದಲ್ಲಿ ಗರಿಷ್ಠ ಹಣ ಮಾಡುವುದು. ಇದರಿಂದ ಭಾರತದ ಸರಕಾರಿ ಖಜಾನೆಗೆ ಭರಪೂರ್ ನಷ್ಟ.

ಹೀಗೆ ಅನಾಯಾಸವಾಗಿ ಬಂದ (ಕಪ್ಪು) ಹಣವನ್ನು ತೆರಿಗೆ ಸ್ವರ್ಗ ಊರುಗಳಾದ ಮಲೇಷ್ಯಾ, ಮಾರಿಷಸ್ ಮತ್ತು ರ್ಜಿನ್ ದ್ವೀಪಗಳಿಗೆ ಸಾಗಣೆ ಮಾಡಿ, ಖಾತೆ ತೆರೆಯುವುದು. ಅಲ್ಲಿಂದ ನಾನಾ ಕಂಪನಿಗಳ ಹೆಸರಿನಲ್ಲಿ ನೇರವಾಗಿ ಎಫ್ ಡಿಐ ಮೂಲಕ ಭಾರತಕ್ಕೆ ಅಂದರೆ ರೆಡ್ಡಿ ಕೈಗೆ ಆ ಹಣವೆಲ್ಲ ಸಕ್ರಮವಾಗಿ ಬಂದು ಸೇರುತ್ತಿತ್ತು. ಜತೆಗೆ ಇಂಡೋನೇಷ್ಯಾದ ಗಣಿಗಳಲ್ಲೂ ರೆಡ್ಡಿ ಹೂಡಿಕೆ ಮಾಡಿದ್ದಾರೆ. ಆದ್ದರಿಂದ ಇವಿಷ್ಟೂ ಅಕ್ರಮ ಹಣ ಸಾಗಣೆಗಳ ಬಗ್ಗೆ ಇ.ಡಿ. ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿದೆ.

ಸದ್ಯಕ್ಕೆ ಸಿಬಿಐ ನೀಡಿರುವ ದಾಖಲೆಗಳನ್ನು ಇ.ಡಿ. ಪರಿಶೀಲಿಸುತ್ತಿದ್ದು, ಈ ವಾರಾಂತ್ಯ ರೆಡ್ಡಿ ಮತ್ತು ಅವರ ಕುಟುಂಬದ ಇತರರ ವಿರುದ್ಧ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+