ಪಕ್ಷೇತರ ಶಾಸಕರ 'ಭಿನ್ನ' ಚಟುವಟಿಕೆಗಳು ಶುರು

ಒಬ್ಬ ಪಕ್ಷೇತರ ಅಭ್ಯರ್ಥಿಯ ಗೆಲುವು ರಾಜ್ಯದ ಉಳಿದ ಪಕ್ಷೇತರ ಸಚಿವರಿಗೆ ಇನ್ನಿಲ್ಲದ ಮಹತ್ವ ತಂದುಕೊಡುತ್ತಿದೆ. ಈಗಾಗಲೆ ವಿಧಾನಸೌಧದ ಅಂಗಳದಲ್ಲಿ ಭಾರೀ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಬಿಜೆಪಿ ಸರಕಾರ ಉಳಿಯುತ್ತದಾ ಎನ್ನುವ ಮಟ್ಟಿಗೆ ವಿಭಿನ್ನ ಧ್ವನಿಗಳು ಪ್ರತಿಧ್ವನಿಸುತ್ತಿವೆ.
ಬಳ್ಳಾರಿಯಲ್ಲಿ ಪಕ್ಷೇತರನಾಗಿ ಶ್ರೀರಾಮುಲು ಭರ್ಜರಿ ಜಯ ಸಾಧಿಸುತ್ತಿದ್ದಂತೆ, ಬಿಜೆಪಿ ಪಾಲಿನ ಸದಾಕಾಲದ ಮುಳ್ಳಾಗಿರುವ ಪಕ್ಷೇತ್ರರ ಸಚಿವರಾದ ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ ಮತ್ತು ಸುಧಾಕರ್ ಒಂದು ಗೂಡಿ ವಿಧಾನಸೌಧದಲ್ಲಿ ಗಹನವಾದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಪರಿಸ್ಥಿತಿಗೆ ತಕ್ಕಂತೆ ಬಣ್ಣ ಬದಲಿಸುವುದನ್ನು ಕರಗತ ಮಾಡಿಕೊಂಡಿರುವ ವರ್ತೂರು ಪ್ರಕಾಶ್ ಮತ್ತೆ ಅಪಸ್ವರದ ರಾಗ ಹಾಡಲು ಶುರು ಮಾಡಿದ್ದಾರೆ. ಭಿನ್ನಾಭಿಪ್ರಾಯ ಮರೆತು 'ಹೊಂದಾಣಿಕೆ' ಮಾಡಿಕೊಂಡು ಹೋದರೆ ಸರಿ, ಇಲ್ಲದಿದ್ದರೆ ಬಿಜೆಪಿ ಸರಕಾರಕ್ಕೆ ಗಂಡಾಂತರ ಕಾದಿದೆ ಎಂದು 'ಭಿನ್ನ'ರಾಗ ತೆಗೆದಿದ್ದಾರೆ. [ಕೋಡಿಮಠ ಸ್ವಾಮೀಜಿ ಭವಿಷ್ಯ]












Click it and Unblock the Notifications