ನಿಜವಾಯಿತೆ ಕೋಡಿಮಠ ಶ್ರೀಗಳು ಹೇಳಿದ ಭವಿಷ್ಯ?

Kodimath Swamiji
ಬೆಂಗಳೂರು, ಡಿ. 4 : ಕೆಲ ದಿನಗಳ ಹಿಂದೆ ಕೋಡಿಮಠ ಶ್ರೀಗಳು ರಾಜಕೀಯ ಸ್ಥಾನ ಪಲ್ಲಟದ ಬಗ್ಗೆ ಭವಿಷ್ಯ ನುಡಿದಿದ್ದರು. ಈ ವರ್ಷದ ಕೊನೆಯಲ್ಲಿ ಕರ್ನಾಟಕದ ರಾಜಕೀಯದಲ್ಲಿ ಭಾರೀ ಸ್ಥಿತ್ಯಂತರಗಳಾಗಲಿವೆ ಎಂದು ಶಕುನ ನುಡಿದಿದ್ದರು. ಕೋಡಿಮಠ ಶ್ರೀಗಳು ಹೇಳಿದ ಭವಿಷ್ಯ ಇದೇನಾ? ತಮ್ಮ ಗೆಲುವು ಸ್ವಾಭಿಮಾನದ, ಸತ್ಯದ, ಧರ್ಮದ ಗೆಲುವು ಎಂದು ಬೀಗುತ್ತಿರುವ ಶ್ರೀರಾಮುಲು ಮುಂದಿನ ನಡೆಗಳೇನು?

ಕುಮಾರ್ ಆಟ ಆರಂಭ : ಪಕ್ಷೇತರರ ತಂತ್ರಗಾರಿಕೆ ಶುರುವಾಗಿರುವುದು ಒಂದೆಡೆಯಾದರೆ, ಶ್ರೀರಾಮುಲು ಗೆಲುವಿನಿಂದ ಬೀಗುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಸಂಪೂರ್ಣ ಲಾಭ ಪಡೆಯಲು ಹವಣಿಕೆ ನಡೆಸುತ್ತಿದ್ದಾರೆ. ಹಿಂದೆ ಭಿನ್ನಮತೀಯರು ತಿರುಗಿಬಿದ್ದಿದ್ದಾಗಲೂ ಕುಮಾರ್ ಪರಿಸ್ಥಿತಿಯ ಲಾಭ ಹೊಡೆಯಲು ಸಂಚು ಹೂಡಿದ್ದರು.

"ಶ್ರೀರಾಮುಲು ಗೆಲುವಿನಿಂದ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಬಿಜೆಪಿಗೆ ಸರಕಾರ ಬೀಳುವ ಆತಂಕ ಕಾಡುತ್ತಿದೆ. ರಾಷ್ಟ್ರೀಯ ಪಕ್ಷಗಳನ್ನು ತ್ಯಜಿಸಿ ಪ್ರಾದೇಶಿಕ ಪಕ್ಷವನ್ನು ಕೈಹಿಡಿಯಲು ಇದು ಸಕಾಲ. ತಾವು ಯಾವುದೇ ಪ್ರಾದೇಶಿಕ ಪಕ್ಷದ ಜೊತೆ ಕೈಜೋಡಿಸಲು ಸಿದ್ಧ" ಎಂದು ಹೇಳಿರುವ ಕುಮಾರಸ್ವಾಮಿ ಪಗಡೆಯ ದಾಳಗಳನ್ನು ಉರುಳಿಸಲು ಪ್ರಾರಂಭಿಸಿದ್ದಾರೆ.

ಎಲ್ಲರ ಕಣ್ಣು ಯಡಿಯೂರಪ್ಪ ಮೇಲೆ : ಎಲ್ಲಕ್ಕಿಂತ ಹೆಚ್ಚಾಗಿ ಸದಾನಂದ ಗೌಡರಿಗಿಂತ ಯಡಿಯೂರಪ್ಪನವರ ಮೇಲೆ ಎಲ್ಲ ಕಣ್ಣುಗಳ ಕೇಂದ್ರೀಕೃತವಾಗಿವೆ. ಕೊನೆ ಹಂತದಲ್ಲಿ ಪ್ರಚಾರಕ್ಕೆ ಬರದೆ ಕೈಕೊಟ್ಟ ಯಡಿಯೂರಪ್ಪ ಪರೋಕ್ಷವಾಗಿ ಶ್ರೀರಾಮುಲು ಗೆಲುವಿಗೆ ಕಾರಣರಾದರೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ತಮ್ಮ ಪ್ರಶ್ನಾತೀತ ನಾಯಕತ್ವವಿಲ್ಲದೆ ಬಿಜೆಪಿಗೆ ಚುನಾವಣೆಯಲ್ಲಿ ಗೆಲುವು ಅಸಾಧ್ಯ ಎಂಬುದನ್ನು ಅವರು ಮತ್ತ ಮನವರಿಕೆ ಮಾಡಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+