ಬಳ್ಳಾರಿ ಸಮರದ 'ಗುಪ್ತ' ಫಲಿತಾಂಶ: ಬಿಜೆಪಿಗೆ 3ನೇ ಸ್ಥಾನ

ಗುಪ್ತ ದಳದ ಐಜಿ ಗೋಪಾಲ್ ಹೊಸೂರ್ ಹಾಗೂ ಡಿಐಜಿ ಶರತ್ ಚಂದ್ರ ಜಂಟಿಯಾಗಿ ನೀಡಿರುವ ವರದಿಯಲ್ಲಿ ಈ ಅಂಶ ಸ್ಪಷ್ಟಪಡಿಸಿದ್ದು, ಶ್ರೀರಾಮುಲು ಮೇಲುಗೈ ಸಾಧಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತಿಮವಾಗಿ ಶ್ರೀರಾಮುಲು ಮತ್ತು ಕಾಂಗ್ರೆಸ್ ನಡುವೆಯೇ ತೀವ್ರ ಸ್ಪರ್ಧೆಯಾಗಲಿದ್ದು, ಬಿಜೆಪಿ ತನ್ನ ಸ್ಧಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಪಕ್ಷೇತರ ಅಭ್ಯರ್ಥಿ ರಾಮುಲು ಗೆದ್ದರೆ ಏನಾಗಬಹುದು? ಒಂದು ವೇಳೆ ಬಿಜೆಪಿಯ ಗಾದಿ ಲಿಂಗಪ್ಪ ದಿಗ್ವಿಜಯ ಸಾಧಿಸಿದರೆ ಆಗಬಹುದಾದ ಪರಿಣಾಮಗಳೇನು? ಎರಡೂ ಬಣದ ಒಡಕಿನ ಲಾಭ ಪಡೆದು ರಾಮಪ್ರಸಾದ್ ಗೆದ್ದರೆ ಕಾಂಗ್ರೆಸ್ ಪಕ್ಷದ ಭವಿಷ್ಯ ಯಾವ ದಿಕ್ಕಿನತ್ತ ಸಾಗಬಹುದು? ಹೀಗೆ ಹತ್ತು ಹಲವು ಕೋನಗಳಲ್ಲಿ ಚರ್ಚೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲೇ ಗುಪ್ತದಳ ವರದಿ ತೀವ್ರ ಕುತೂಹಲ ಕೆರಳಿಸಿದೆ.












Click it and Unblock the Notifications