ರೆಡ್ಡಿ ಅಕ್ರಮ: ಶ್ರೀಲಕ್ಷ್ಮಿ ಅಂತೂ ಅಮಾನತು; ಜೈಲಿಗೆ ರವಾನೆ

ರೆಡ್ಡಿ ಅಕ್ರಮ: ಶ್ರೀಲಕ್ಷ್ಮಿ ಅಂತೂ ಅಮಾನತು; ಜೈಲಿಗೆ ರವಾನೆ
ಹೈದರಾಬಾದ್, ನ. 30: ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸೋಮವಾರ ಸಂಜೆ ಸಿಬಿಐನಿಂದ ಬಂಧನಕ್ಕೊಳಗಾದ ಐಎಎಸ್ ಟಾಪರ್ ಯರ‌್ರಂ ಶ್ರೀಲಕ್ಷ್ಮಿ ಅವರನ್ನು 22 ವರ್ಷಗಳ ಸೇವೆಯ ನಂತರ ಆಂಧ್ರ ಸರಕಾರ ಗುರುವಾರ ಐಎಎಸ್ ಪಟ್ಟದಿಂದ ಅಮಾನತು ಮಾಡಿದೆ. ಇದೇ ವೇಳೆ 3 ದಿನಗಳ ಸಿಬಿಐ ಕಸ್ಟಡಿ ಮುಗಿದಿರುವುದರಿಂದ ಅವರನ್ನು ಚಂಚಲಗೂಡ ಜೈಲಿಗೂ ಕಳಿಸಲಾಗಿದೆ.

ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಅಕ್ರಮವಾಗಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಬಂಧಿಸಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಂಕಜ್ ದ್ವಿವೇದಿ ಅವರಿಗೆ ಸಿಬಿಐ ವರದಿ ಕಳುಹಿಸಿತ್ತು.

ಅದರ ಆಧಾರದ ಮೇಲೆ ದ್ವಿವೇದಿ ಗುರುವಾರ ಅಮಾನತು ಕ್ರಮ ಕೈಗೊಂಡರು. ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಎನ್.ಕಿರಣ್‌ಕುಮಾರ್ ರೆಡ್ಡಿ ಬುಧವಾರ ಸಂಜೆ ಸಹಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ಶ್ರೀಲಕ್ಷ್ಮಿ ಪ್ರಸ್ತುತ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಸಂಪುಟದಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ಜನಾರ್ದನ ರೆಡ್ಡಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆಪಾದನೆ ಅವರ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+