ಚಂಚಲಗೂಡ ಜೈಲಿನಲ್ಲಿ ಶ್ರೀಲಕ್ಷ್ಮಿ ಈಗ ಕೈದಿ ನಂ. 4332

ಇತ್ತೀಚಿನ ದಿನಗಳಲ್ಲಿ ಹೈ ಪ್ರೋಪೈಲ್ ಆರೋಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರಿಕೊಳ್ಳುತ್ತಿದ್ದಾರಾದರೂ ಇಂತಹ ಹೈ ಪ್ರೋಪೈಲ್ ಪ್ರಕರಣಗಳಲ್ಲಿ ಜೈಲುಪಾಲಾದ ಮೊದಲ ಮಹಿಳಾ ಆರೋಪಿ ಎಂಬ ಕುಖ್ಯಾತಿಗೆ ಶ್ರೀಲಕ್ಷ್ಮಿ ಇದೀಗ ಪಾತ್ರರಾಗಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಸರಿಯಾಗಿ ಚಂಚಲಗೂಡ ಜೈಲಿಗೆ ಹಸಿರು ಸೀರೆಯುಟ್ಟಿದ್ದ ಶ್ರೀಲಕ್ಷ್ಮಿ ಎಂಟ್ರಿ ಹಾಕಿದರು. ತೀವ್ರವಾಗಿ ನಿತ್ರಾಣಗೊಂಡಂತೆ ಕಂಡುಬಂದ ಮಾಜಿ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಮಹಿಳಾ ಜೈಲಿನೊಳಕ್ಕೆ ಬರುತ್ತಿದ್ದಂತೆ ಗಳಗಳನೆ ಅಳುತ್ತಾ, ಕುಸಿದುಬಿದ್ದರು. ಜೈಲಿನ ಬ್ಯಾರಕ್ 9ನಲ್ಲಿ ಇನ್ನೂ 10 ಕೈದಿಗಳ ಜತೆ ಶ್ರೀಲಕ್ಷ್ಮಿ ವಾಸವಾಗಲಿದ್ದಾರೆ. ಸಿಮೆಂಟ್ ನೆಲ ಮೇಲೆ ಮಲಗಬೇಕಾಗಿದ್ದು, ಒಂದೇ ಟಾಯ್ಲೆಟ್ ಮತ್ತು ಬಾತ್ ರೂಂ ಹಂಚಿಕೊಳ್ಳಬೇಕಾಗಿದೆ.
ಅದಕ್ಕೂ ಮುನ್ನ, ಮಧ್ಯಾಹ್ನ 3.30ಕ್ಕೆ ಕೋರ್ಟಿಗೆ ಹಾಜರಾದ ಶ್ರೀಲಕ್ಷ್ಮಿ, 'ನಾನು ಜೈಲಿಗೆ ಹೋಗೊಲ್ಲ. ಇಲ್ಲೇ ಸಿಬಿಐ ಕಚೇರಿಯಲ್ಲೇ ನ್ಯಾಯಾಂಗ ಬಂಧನ ಅನುಭವಿಸುತ್ತೇನೆ' ಎಂದು ನ್ಯಾಯಾಧೀಶ ಬಿ. ನಾಗಮಾರುತಿ ಶರ್ಮಾ ಅವರನ್ನು ಪರಿಪರಿಯಾಗಿ ಬೇಡಿಕೊಂಡರೂ ನ್ಯಾಯಾಧೀಶರು ತಮ್ಮ ಅಸಹಾಯಕತೆ ಪ್ರದರ್ಶಿಸಿದರು.
ಡಿಸೆಂಬರ್ 12ರವರೆಗೂ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ಆದರೆ ಇಂದು ಶುಕ್ರವಾರ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಶ್ರೀಲಕ್ಷ್ಮಿ ಪತಿ, 1983ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಗೋಪಿಕೃಷ್ಣ ಸೇರಿದಂತೆ ಯಾವೊಬ್ಬ ಕುಟುಂಬ ಸದಸ್ಯರೂ ಜೈಲುವರೆಗೂ ಶ್ರೀಲಕ್ಷ್ಮಿಗೆ ಸಾಥ್ ನೀಡಲಿಲ್ಲ. ಕೋರ್ಟಿಗೆ ಬಂದವರು ಜೈಲುವರೆಗೂ ಅವರು ಯಾರೂ ತಮ್ಮ ಪಾಸದ ಬೆಳೆಸಲಿಲ್ಲ.












Click it and Unblock the Notifications