2ಜಿ ಹಗರಣ: ರಾಜಾಗೆ ಬಿಡುಗಡೆಯ ಭಾಗ್ಯ ಮರೀಚಿಕೆ

ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರು ಗುರುವಾರ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯಾ ಅವರಿಗೆ ಜಾಮೀನು ನೀಡುತ್ತಾ ಒಂದು ಖಡಕ್ ಸಂದೇಶವನ್ನೂ ರವಾನಿಸಿದೆ. ಅಂದರೆ, ಯಾವುದೇ ಕಾರಣಕ್ಕೂ ರಾಜಾ ಮತ್ತು ಬೆವೂರಾ ಅವರಿಬ್ಬರು ಸದ್ಯಕ್ಕೆ ಜೈಲಿನಿಂದ ಹೊರಬರೊಲ್ಲ.
ರಾಜಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಚಂದೋಲಿಯಾಗೆ 'ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಇರಲಿಲ್ಲ. ಅಲ್ಲದೆ ಅವರೇ ಖುದ್ದಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಇಲ್ಲ' ಎಂದು ನ್ಯಾಯಾಧೀಶ ಸೈನಿ ಹೇಳಿದರು.
'ಸಹ ಆರೋಪಿ ಎ. ರಾಜಾ ದೂರಸಂಪರ್ಕ ಖಾತೆ ಮುಖ್ಯಸ್ಥರಾಗಿದ್ದರು. ಬೆವೂರಾ ಅವರು ಅದರ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದರು. ಇಂತಹ ಸಂದರ್ಭದಲ್ಲಿ ಚಂದೋಲಿಯಾ ಅವರ ಪ್ರಕರಣ ಈ ಇಬ್ಬರೊಂದಿಗೆ ಯಾವುದೇ ರೀತಿಯಲ್ಲೂ ಹೋಲುವುದಿಲ್ಲ' ಎಂದು ಕೋರ್ಟ್ ಹೇಳಿತು. ಅದಕ್ಕೂ ಮುನ್ನ ಸಿಬಿಐ ಪರ ನ್ಯಾಯವಾದಿ ಯುಯು ಲಲಿತ್ ಅವರು ಚಂದೋಲಿಯಾಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.












Click it and Unblock the Notifications