ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮೂಹಿಕ ಆತ್ಮಹತ್ಯೆಗೆ ಶರಣಾದ ವೈದ್ಯರ ಕುಟುಂಬ

By Prasad
|
Google Oneindia Kannada News

Doctor family commits suicide in Bangalore
ಬೆಂಗಳೂರು, ಡಿ. 2 : ವೈದ್ಯರನ್ನೇ ನಾರಾಯಣನೆಂದು ರೋಗಿಗಳು ಕರೆಯುತ್ತಾರೆ. ಆದರೆ, ರೋಗಿಗಳನ್ನೇ ದೇವರೆಂದು ಸುಶ್ರೂಶೆ ಮಾಡುತ್ತಿದ್ದ ದಯಾಳು ಡಾಕ್ಟರ್ ಡಾ. ಅಮಾನುಲ್ಲಾ ಕುಟುಂಬದ ರಕ್ಷಣೆಗೆ ಸ್ವತಃ ಅಲ್ಲಾ, ನಾರಾಯಣ ಯಾರೂ ಬರಲಿಲ್ಲ.

ಸಾಲ ಬಾಧೆ ತಾಳಲಾರದೆ ವೈದ್ಯರ ಕುಟುಂಬದ ಎಲ್ಲ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ವಾಲ್ಮಿಕಿನಗರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಬಡಬಗ್ಗರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ.

ಆತ್ಮಹತ್ಯೆಗೆ ಶರಣಾದವರನ್ನು ಡಾ. ಅಮಾನುಲ್ಲಾ ಖಾನ್(60), ಅವರ ಹೆಂಡತಿ ಡಾ. ನವೀದಾಬಾನು(50), ಮಕ್ಕಳಾದ ಡಾ.ಮೊಹಮ್ಮದ್ ಇಹ್ತೆಶಾನ್ ರಶೀದ್(28) ಮತ್ತು ಮೊಹಮ್ಮದ್ ಅಹ್ಸಾಮ್ ರಶೀದ್(26) ಎಂದು ಗುರುತಿಸಲಾಗಿದೆ. ಗಂಡ, ಹೆಂಡತಿ ಮತ್ತು ಮೊದಲ ಮಗ ವೃತ್ತಿಯಿಂದ ವೈದ್ಯರಾಗಿದ್ದಾರೆ. ಎರಡನೇ ಮಗ ಕೂಡ ಎಂಬಿಬಿಎಸ್ ಓದುತ್ತಿದ್ದ. ಸದಾ ಮುಗುಳ್ನಗುತ್ತಿದ್ದ ಅಮಾನುಲ್ಲಾ ಜೀವನದಲ್ಲಿ ಖುದಾ ಈ ಆಟ ಆಡಬಾರದಿತ್ತು.

ಖುದಾ ಕೇರ್ ನರ್ಸಿಂಗ್ ಹೋಂ ಕೊಳ್ಳುವ ಸಲುವಾಗಿ ಕೋಲಾರದಿಂದ 35 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಡಾ. ಅಮಾನುಲ್ಲಾ ಸುಮಾರು 2 ಕೋಟಿ. ರು. ಸಾಲ ಮಾಡಿದ್ದರು. ಮತ್ತು ಕೋಲಾರದಲ್ಲಿ ಎಂಬಿಬಿಎಸ್ ಓದುತ್ತಿದ್ದ ಎರಡನೇ ಮಗನ ಸಲುವಾಗಿಯೂ ಆಗಾಧ ಸಾಲ ಮಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ ನಾಜಿಯಾ ಎಂಬ ದತ್ತು ಪುತ್ರಿಯೂ ಇದ್ದಾಳೆ.

ಆದರೆ, ನರ್ಸಿಂಗ್ ಹೋಂ ಲಾಭದಾಯಕವಾಗಿ ನಡೆಯುತ್ತಿರಲಿಲ್ಲ. ಸಾಲ ನೀಡಿದವರ ಉಪಟಳವೂ ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿತ್ತು. ಇದಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಗುರುವಾರ ರಾತ್ರಿ ವಿಷವನ್ನು ಇಂಜೆಕ್ಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

English summary
4 members of a doctor family committed suicide by injecting poison into their blood on Friday, November 2 in Bangalore. Dr Amanulla had raised huge loan for nursing home and for his son's medical education. Unable to repay the loan, entire family decided to end their lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X