ಮಾಗಿಯ ಚಳಿಗೆ ಬಿಜೆಪಿ ಥರಥರ; ಪಕ್ಷೇತರ ಶಾಸಕರಿಗೆ ಗಾಳ
ಶಿವಮೊಗ್ಗ,
ಡಿ.2: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಫಲಿತಾಂಶ ತನಗೆ ವ್ಯತಿರಿಕ್ತವಾಗಬಹುದೆಂದು ಅಂದಾಜಿಸಿರುವ ಬಿಜೆಪಿ ಮಾಗಿಯ ಚಳಿಯಲ್ಲೂ ಸಣ್ಣಗೆ ಬೆವರತೊಡಗಿದೆ. ಒಂದು ವೇಳೆ ಉಪ ಸಮರ ಸೋತರೆ ಮುಂದೇನು ಮಾಡಬೇಕು. ಸರಕಾರಕ್ಕೆ ಅಪಾಯ ಎದುರಾದರೆ ಏನೆಲ್ಲ ಮಾಡಬೇಕು ಎಂಬ ಲೆಕ್ಕಾಚಾರದೊಂದಿಗೆ ಚುನಾವಣೋತ್ತರ ಕಾರ್ಯಾಚರಣೆಗೆ ಚಾಲನೆ ನೀಡಿದೆ. id="toptextpromo">ಒಂದು
ವೇಳೆ ಬಿಜೆಪಿ ಸೋತು, ಶ್ರೀರಾಮುಲು ಮತ್ತೆ ಶಾಸಕರಾದರೆ ಅವರೇ ಬಳ್ಳಾರಿಯ ಮುಕುಟವಿಲ್ಲದ ರಾಜ ಎಂಬುದು ನಿಶ್ಚಿತ. ಇದರ ಸುತ್ತಮುತ್ತ ನೋಡಿದಾಗ ಆಪರೇಶನ್ ಕಮಲದ ಅನುಭವಿ ರಾಜಕಾರಣಿಯಾಗಿ ಹೊರಹೊಮ್ಮಿರುವ ಶ್ರೀರಾಮುಲು ಅಕ್ಕಪಕ್ಕದ ಜಿಲ್ಲೆಗಳಿಂದ ಕನಿಷ್ಠ 15-20 ಶಾಸಕರನ್ನಾದರೂ ತಮ್ಮತ್ತ ಸೆಳೆಯುತ್ತಾರೆ. ಅಲ್ಲಿಗೆ ಸರಕಾರ ಖಲಾಸ್ ಎಂಬುದು ಬಿಜೆಪಿಯ ಚಿಂತೆ, ಚಿಂತನೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಸಚಿವ ಆಸ್ನೋಟಿಕರ್ ಅವರ ಮುಖಾಂತರ ಪಕ್ಷೇತರ ಶಾಸಕ, ಮಾಜಿ ಸಚಿವ, ಮಾಜಿ ಬಿಜೆಪಿ ಬೆಂಬಲಿಗ ಗೂಳಿಹಟ್ಟಿ ಶೇಖರ್ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಮಾತನಾಡಿದ್ದಾರೆ. ಗೂಳಿಹಟ್ಟಿ ಈ ವಿಷಯವನ್ನು ಖಚಿತಪಡಿಸಿದ್ದು, ಕುಶಲೋಪರಿ ವಿಚಾರಿಸಲು ಈಶ್ವರಪ್ಪ ಅವರ ಮನೆಗೆ ಹೋಗಿದ್ದೆ ಎಂದಿದ್ದಾರೆ.











Click it and Unblock the Notifications