ಡುಮ್ಮಿ ಎಂದಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ನೋಡೋದಕ್ಕೆ ಸ್ವಲ್ಪ ದಪ್ಪಗಿದ್ದ 22 ವರ್ಷದ ಗಾಯತ್ರಿ ರೆಡ್ಡಿ, ಆನೇಕಲ್ ಬಳಿಯ ಶಿರಡಿ ಸಾಯಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಗಾಯತ್ರಿಗೆ ಆಗಾಗ ಹೊಟ್ಟೆನೋವು ಬರುತ್ತಿತ್ತು. ಅದಕ್ಕೆ ಅನೇಕ ಕಡೆ ಚಿಕಿತ್ಸೆ ಪಡೆದರೂ ಫಲಕಾರಿಯಾಗಿರಲಿಲ್ಲ.
ಕಾಲೇಜಿನಲ್ಲಿ ಎಲ್ಲರೂ ಡುಮ್ಮಿ ಡುಮ್ಮಿ ಎಂದು ಕರೆದು ಗೇಲಿ ಮಾಡುತ್ತಿದ್ದರು. ಆದರೆ, ಟೀಸಿಂಗ್ ಕಾಮನ್ ಎಂದು ತಂದೆ ನಾರಾಯಣ ರೆಡ್ಡಿ ಮಗಳಿಗೆ ಸಾಂತ್ವನ ಹೇಳಿದ್ದರು.
ಆದರೆ, ಇತ್ತೀಚೆಗೆ ಸಹಪಾಠಿಗಳ ಗೇಲಿಯಿಂದ ತೀವ್ರವಾಗಿ ಮನನೊಂದಿದ್ದ ಗಾಯತ್ರಿ, ಅಪ್ಪ ಅಮ್ಮ ಮನೆಯಲ್ಲಿ ಇಲ್ಲದ ವೇಳೆ ನೋಡಿಕೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಸಹಪಾಠಿಗಳ ಟೀಸಿಂಗ್ ಬಗ್ಗೆ ಪೋಷಕರಿಂದ ತಿಳಿದರೂ ಹೊಟ್ಟೆ ನೋವಿನ ಕಾರಣ ಯುವತಿ ಆತ್ಮಹತ್ಯೆ ಎಂದು ಷರಾ ಬರೆದು ಕೇಸ್ ಖತಂ ಮಾಡಲಾಗಿದೆ.












Click it and Unblock the Notifications