ಸಿಬಿಐ ಸೆರೆ: ಎದೆಹಿಡಿದು ರೋದಿಸಿದ ಐಎಎಸ್ ಶ್ರೀಲಕ್ಷ್ಮಿ

ಇತ್ತ ತಮ್ಮ ಪತ್ನಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಗೋಪಿಕೃಷ್ಣ ತಮ್ಮ ವಕೀಲರನ್ನು ಜತೆಗೆ ಕರೆದುಕೊಂಡು ಎದ್ನೋ ಬಿದ್ನೋ ಎಂದು ನಾಂಪಲ್ಲಿ ಮೆಟ್ರೋಪಾಲಿಟಿನ್ ಕೋರ್ಟಿನ ಆವರಣದತ್ತ ದೌಡಾಯಿಸಿದರು.
ಅಲ್ಲಿನ ನ್ಯಾಯಾಲಯ ತಮ್ಮದು ಅಧೀನ ನ್ಯಾಯಾಲಯವಾಗಿದೆ. ಶ್ರೀಲಕ್ಷ್ಮಿ ಅವರನ್ನು ಸಿಬಿಐ ಕೋರ್ಟಿನಲ್ಲಿ ಮಂಗಳವಾರ ಮತ್ತೆ ಸಾದರಪಡಿಸಿ ಎಂದು ಸಿಬಿಐಗೆ ಸೂಚಿಸಿದೆ. ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರು ಒತ್ತಡ ಹೇರಿದ್ದರಿಂದಾಗಿ ಕಣ್ಮುಚ್ಚಿಕೊಂಡು ಫೈಲುಗಳುಗೆ ಸಹಿ ಹಾಕಿದೆ. ನನ್ನದೇನೂ ತಪ್ಪಿಲ್ಲ ಎಂದು ವಿಚಾರಣೆಯ ವೇಳೆ ಶ್ರೀಲಕ್ಷ್ಮಿ ಗೊಳೋ ಎಂದಿದ್ದಾರೆ.
ಅಂದರೆ ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಸ್ಥ ರಾಜಕಾರಣಿಗಳೂ ಶಾಮೀಲಾಗಿರುವ ಲಕ್ಷಣಗಳಿವೆ. ಆದ್ದರಿಂದ ಈಕೆಯನ್ನು ಇನ್ನೂ ವಿಚಾರಣೆಗೊಳಪಡಿಸಬೇಕು. 10 ದಿನಗಳ ಕಾಲ ನಮ್ಮ ಸುಪರ್ದಿಗೆ ಒಪ್ಪಿಸಿ ಎಂದು ಕೋರ್ಟಿಗೆ ಸಿಬಿಐ ಮನವಿ ಮಾಡಿಕೊಂಡಿದೆ.
ಆದರೆ ಶ್ರೀಲಕ್ಷ್ಮಿ ಅವರು ಎಲ್ಲ ವಿಐಪಿ ಬಂಧಿಗಳಂತೆ ಎದೆಬಡಿದುಕೊಳ್ಳುತ್ತಾ ನನಗೆ ಹೃದಯ ಬೇನೆ ಇದೆ. ಇವತ್ತೊಂದು ರಾತ್ರಿ ಸಿಬಿಐ ಕಚೇರಿಯಲ್ಲೇ ಮಲಗಲು ಅವಕಾಶ ಕೊಡಿ. ನಾಳೆ ವೇಳೆಗೆ ನನ್ನ ಪತಿರಾಯ ಹೇಗೋ ಜಾಮೀನಿಗೆ ವ್ಯವಸ್ಥೆ ಮಾಡುತ್ತಾನೆ. ನಾನಂತೂ ಸುತರಾಂ ಜೈಲಿಗೆ ಹೋಗೊಲ್ಲ ಎಂದು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ ಆಂಧ್ರದಲ್ಲಿ ಪೊಲೀಸ್ ಬಂಧನಕ್ಕೊಳಗಾದ ಮೊದಲ ಅಧಿಕಾರಸ್ಥ ಐಎಎಸ್ ಮಹಿಳಾ ಮಣಿಯಾಗಿದ್ದಾರೆ.











Click it and Unblock the Notifications