ರೆಡ್ಡಿ ಅಕ್ರಮ: ಐಎಎಸ್ ಶ್ರೀಲಕ್ಷ್ಮಿ ಸೆರೆಯ ಸುತ್ತಮುತ್ತ?

reddy-ysr-illegal-mining-how-ias-srilakshmi-held
ಹೈದರಾಬಾದ್, ನ. 25: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಸಿಬಿಐನ ಕೋಠಿ ಕೊತ್ತಲೆಯಲ್ಲಿ (ಸಿಬಿಐನ ದಿಲ್‌ಖುಷ್ ಅತಿಥಿ ಗೃಹ) ಮೊದಲ ರಾತ್ರಿ ಕಳೆದಿದ್ದಾರೆ.

ಮುಂದಿನ ರಾತ್ರಿಗಳನ್ನು ಅವರು ಎಲ್ಲಿ ಕಳೆಯಬೇಕು ಎಂಬವುದನ್ನು ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ಕೋರ್ಟ್ ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಧರಿಸಲಿದೆ. ಅದಕ್ಕೂ ಮುನ್ನ ರೆಡ್ಡಿ ಅಕ್ರಮದ ಸಮ್ಮುಖದಲ್ಲಿ ಐಎಎಸ್ ಶ್ರೀಲಕ್ಷ್ಮಿ ಬಂಧನದ ಸುತ್ತಮುತ್ತ ಏನು ನಡೆಯಿತು ಎಂಬುದರ ಸುತ್ತ ಒಂದು ನೋಟ ಇಲ್ಲಿದೆ.

ಸರಿಯಾಗಿ 50 ದಿನಗಳೇ ಹಿಂದೆಯೇ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರು ಹಿರಿಯ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಅವರ ಪತಿ (ಪಕ್ಕದ ಚಿತ್ರದಲ್ಲಿರುವವರು) , ಐಪಿಎಸ್ ಅಧಿಕಾರಿ ಎಂ. ಗೋಪಿಕೃಷ್ಣ ಅವರು CID IG ಎಂಬುದನ್ನೂ ಲೆಕ್ಕಿಸದೆ ನಿರ್ಭಯವಾಗಿ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಅವರನ್ನು ನಾಲ್ಕನೆಯ ಆರೋಪಿಯನ್ನಾಗಿ ಹೆಸರಿಸಿದ್ದರು. ಮತ್ತು ಮಾಫಿ ಸಾಕ್ಷ್ಯಿಯಾಗುತ್ತೇನೆ ಎಂದು ಅಲವತ್ತುಕೊಂಡರೂ, 'ಬೇಡ ಮೇಡಂ ನಮ್ಮ ಬಳಿಯೇ ಸಾಕಷ್ಟು ಸಾಕ್ಷ್ಯಗಳಿವೆ. ನಿಮ್ಮದೇನೂ ಬೇಡ. ಹೊರಡಿ ಸೀದಾ ಜೈಲಿಗೆ' ಎಂದು ನಿನ್ನೆ ಸಂಜೆ ಬಂಧಿಸಿಯೂ ಬಿಟ್ಟರು.

ಆಂಧ್ರಪ್ರದೇಶ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ. ಡಿ. ರಾಜಗೋಪಾಲ್, ಗಾಲಿ ಜನಾರ್ದನ ರೆಡ್ಡಿ, ಅವರ ಭಾವ ಬಿ. ವಿ. ಶ್ರೀನಿವಾಸ ರೆಡ್ಡಿ ಈಗಾಗಲೇ ಜೈಲಿನಲ್ಲಿ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+