ಬಿಜೆಪಿ ಅಪ್ಪಿಕೊಂಡ ಸೂರ್ಯನಾರಾಯಣ ರೆಡ್ಡಿಗೆ ಆಮಿಷದ ಸುರಿಮಳೆ

ಸೂರ್ಯನಾರಾಯಣ ರೆಡ್ಡಿ ಈ ಹಿಂದೆಯೇ ಬಿಜೆಪಿ ಜಿಲ್ಲಾಧ್ಯಕ್ಷ ಆಗಿದ್ದರು. ರೆಡ್ಡಿಗಳ ಆಗಮನದ ಬಳಿಕ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಪ್ರಸ್ತುತ, ಸೂರ್ಯನಾರಾಯಣ ಅವರು ಈ ಚುನಾವಣೆ ಬಳಿಕ ಜಿಲ್ಲಾಧ್ಯಕ್ಷ ಪಟ್ಟದ ಜೊತೆಗೆ ವಿಧಾನ ಪರಿಷತ್ ಸದಸ್ಯತ್ವ ಇಲ್ಲದಿದ್ದರೆ ನಿಗಮ ಮಂಡಳಿ ಹುದ್ದೆಯ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಬಿಜೆಪಿ ಪರಿಶೀಲಿಸುತ್ತಿದ್ದು, ಬಿಜೆಪಿ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ರೆಡ್ಡಿ ಸೋದರರ ವಿರುದ್ದ ತೊಡೆತಟ್ಟಲು ಸಮರ್ಥ ನಾಯಕನ ಲಕ್ಷಣಗಳನ್ನು ಹೊಂದಿರುವ ಇವರಿಗೆ ಮತ್ತೆ ಪಟ್ಟ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕುತೂಹಲದ ಸಂಗತಿಯೆಂದರೆ ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿನಿಂದ ವಾಪಸಾಗಿ ನೇರವಾಗಿ ಬಿಜೆಪಿ ಕದ ತಟ್ಟಿದರೆ ಸೂರ್ಯನಾರಾಯಣ ರೆಡ್ಡಿ ಅವರ ನಡೆಯೇನು ಎಂಬ ಕಹಿ ಪ್ರಶ್ನೆ ಸದ್ಯಕ್ಕೆ ಯಾರಿಗೂ ಬೇಡವಾಗಿದೆ. ಇನ್ನು ಮೂರು ದಿನದಲ್ಲಿ ಸೂರ್ಯನಾರಾಯಣ ರೆಡ್ಡಿ ಎಂಬ ಚಲಾವಣೆಯಲ್ಲಿರುವ ನಾಣ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.












Click it and Unblock the Notifications