ಬಳ್ಳಾರಿ ಚುನಾವಣೆ ಮುನ್ನೆಲೆಯಲ್ಲಿ ಕುಮಾರಣ್ಣನ ನಡೆ-ನುಡಿಯೇನು?

bellary-bypolls-suryanarayana-reddy-favours-bjp
ಬಳ್ಳಾರಿ, ನ 28: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿ ಎಸ್ ರಾಜ್ಯಾಧ್ಯಕ್ಷ ಕುಮಾರಣ್ಣ ಅವರ ಪರಿಸ್ಥಿತಿ ನೋಡಿದರೆ 'ಏನೋ ಮಾಡಲು ಹೋಗಿ ಏನು ಮಾಡಿದೆ ನೀನು? ಎಂದು ಏಳುವಂತಾಗಿದೆ. ಶ್ರೀರಾಮುಲು ಬಂಡಾಯವೆದ್ದಿರುವುದನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಣಿಕೆಯೊಂದಿಗೆ ಆಟವಾಡಲು ಹೋದ ಕುಮಾರಸ್ವಾಮಿ ಸೆಲ್ಫ್ ಗೋಲ್ ಹೊಡೆದಿದ್ದಾರೆ. ಬಿಜೆಪಿಗೆ ಟಾಂಗ್ ಕೊಡುವ ಆತುರದಲ್ಲಿ ಸ್ವಪಕ್ಷೀಯರನ್ನು ಕಡೆಗಣಿಸಿದ್ದೇ ಇದಕ್ಕೆ ಹೇತುವಾಗಿದೆ.

ಬಳ್ಳಾರಿಯ ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್ ಆರ್ ಸೂರ್ಯನಾರಾಯಣ ರೆಡ್ಡಿ ಬಿಜೆಪಿಯತ್ತ ಒಲವು ತೋರಿದ್ದು, ಇದರಿಂದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮತಗಳು ಬಿಜೆಪಿಯತ್ತ ವಾಲುವ ಲಕ್ಷಣಗಳು ಗೋಚರಿಸುತ್ತಿವೆ. ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿರುವುದೇ ಸೂರ್ಯನಾರಾಯಣ ರೆಡ್ಡಿ ಅವರ ಈ ನಡೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

ಎನ್ ಆರ್ ಸೂರ್ಯನಾರಾಯಣ ರೆಡ್ಡಿ ಮೂಲತಃ ಈ ಹಿಂದೆ ಬಳ್ಳಾರಿ ಗ್ರಾಮೀಣ ಕ್ಷೇತ್ರ ಶಾಸಕರಾದ್ದು ಬಿಗಿ ಹಿಡಿತಹೊಂದಿದ್ದರು. ಜತೆಗೆ ಅವರು ಬಿಜೆಪಿಯ ವಿರೋಧಿಗಳಾದ ರೆಡ್ಡಿ ಸೋದರರು ಮತ್ತು ಕುಮಾರಣ್ಣನನ್ನು ವಿರೋಧಿಸುತ್ತಿರುವುದು ಸೂರ್ಯನಾರಾಯಣ ರೆಡ್ಡಿ ಬಿಜೆಪಿಗೆ ಅನಾಯಸಾವಾಗಿ ಬಂದ ಭಾಗ್ಯವಾಗಿದೆ. ಇದರಿಂದ ಜೆಡಿಎಸ್‌ನ 10 ಸಾವಿರಕ್ಕೂ ಅಧಿಕ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದ ಬಿಜೆಪಿಗೆ ಕೆಲಸ ಸಲೀಸಾಗಲಿದೆ.

ಕುಮಾರ ಕುತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೆಣೆಯುವ ಮೂಲಕ ಕುಮಾರ ರಣತಂತ್ರವನ್ನು ಫ‌ಲಿಸದಂತೆ ಮಾಡಿದೆ. ಇದೀಗ ಸೂರ್ಯನಾರಾಯಣ ರೆಡ್ಡಿ ಅಣತಿಯಂತೆ ಜೆಡಿಎಸ್‌ನ ಸಾವಿರಾರು ಓಟುಗಳು ಕಮಲಕ್ಕೆ ಹೋಗುವುದು ನಿಶ್ವಿ‌ತವಾಗಿದೆ. ಇದಕ್ಕಾಗಿ ಬಳ್ಳಾರಿ ವಿಧಾನಸಭಾ ಗ್ರಾಮಾಂತರ ಜೆಡಿಎಸ್‌ ಘಟಕದ ಎಲ್ಲ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಗತ್ಯ ಹಣಕಾಸು ನೆರವು ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+