ಜನಾರ್ದನ ರೆಡ್ಡಿ ವಿರುದ್ಧ ಚಾರ್ಜಷೀಟ್ ರೆಡಿ: ಸಿಬಿಐ

reddy-illegal-mining-cbi-ready-with-charge-sheet
ಹೈದರಾಬಾದ್, ನ. 28: ಓಬಲಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈಗಾಗಲೇ ಜೈಲುಗೂಡು ಸೇರಿಕೊಂಡಿರುವ (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ವಿರುದ್ಧ ಆರೋಪಪಟ್ಟಿ (ಚಾರ್ಜ್-ಷೀಟ್) ರೆಡಿಯಾಗಿದೆ. ಸದ್ಯದಲ್ಲೇ (ಡಿಸೆಂಬರ್ 3) ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದನ್ನು ದಾಖಲಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ವಿಚಾರಣೆ, ತನಿಖೆಗಳ ನಂತರ ಪೂರಕ ಚಾರ್ಜ್-ಷೀಟ್ ಸಲ್ಲಿಸುವ ಇರಾದೆಯೂ ಸಿಬಿಐಗೆ ಇದೆ.

ಈ ಹಿಂದೆ, ಅಕ್ಟೋಬರಿನಲ್ಲಿ ಮೊದಲ ಬಾರಿಗೆ ಸಿಬಿಐ ಆತುರಾತುರವಾಗಿ ಚಾರ್ಜ್-ಷೀಟ್ ಸಲ್ಲಿಸಲು ತವಕಿಸಿತ್ತು. ಆದರೆ ನ್ಯಾಯಾಲಯ ಸುಮ್ಮನೆ ಅದರ ಮೇಲೆ ಕಣ್ಣಾಡಿಸಿ, 'ಓಕೆ. ಇದುವರೆಗಿನ ಚಾರ್ಜ್-ಷೀಟ್ ಸರಿಯಾಗಿಯೇ ಇದೆ. ಆದರೆ ನ್ಯಾಯಾಲಯಕ್ಕೆ ಸಮಗ್ರ ವರದಿ ಬೇಕಾಗಿದೆ. ಆದ್ದರಿಂದ ಕಾಲಾವಕಾಶ ತೆಗದುಕೊಂಡು ಪೂರ್ಣ ಪ್ರಮಾಣದ ಚಾರ್ಜ್-ಷೀಟ್ ದಾಖಲಿಸಿ' ಎಂದು ಸಿಬಿಐಗೆ ಸಲಹೆ ನೀಡಿತ್ತು.

ನಾಯ್ಡು ವಿರುದ್ಧ ಓಬಳಾಪುರಂ ಕೇಸ್ ಹಾಕೊಲ್ಲ: ಈ ಮಧ್ಯೆ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ಮಾತು (ಆರೋಪ) ಕೇಳಿಕೊಂಡು ಓಬಲಾಪುರಂ ಮೈನಿಂಗ್ ಪ್ರಕರಣದಲ್ಲಿ ತೆಲುಗುದೇಶಂ ಅಧಿನಾಯಕ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಕೇಸ್ ಹಾಕುವುದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಓಬಲಾಪುರಂ ಮೈನಿಂಗ್ ಪ್ರಕರಣದಲ್ಲಿ ತೆಲುಗುದೇಶಂ ಅಧಿನಾಯಕ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಜಗನ್ ಹೊರಿಸಿರುವ ಆರೋಪದ ಬಗ್ಗೆ ಆರೋಪಪಟ್ಟಿಯಲ್ಲಿ ಪ್ರಸ್ತಾಪ ಮಾಡಲಾಗುವುದಾದರೂ ಅವರಿಗೆ ನೋಟಿಸ್ ಏನೂ ನೀಡಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ. ಹಾಗೆಂದ ಮಾತ್ರಕ್ಕೆ ಚಂದ್ರಬಾಬು ನಾಯ್ಡುಗೆ ಕ್ಲೀನ್ ಚಿಟ್ ನೀಡಲಾಗಿದೆಯಾ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+